ಇಂಡಿಯನ್‌ ಸೂಪರ್ ಲೀಗ್‌: ಮೊದಲ ಜಯದ ನಿರೀಕ್ಷೆಯಲ್ಲಿ ಡೈನಾಮೋಸ್‌

7
ಗುರುವಾರ ನಡೆಯಲಿರುವ ಪಂದ್ಯ

ಇಂಡಿಯನ್‌ ಸೂಪರ್ ಲೀಗ್‌: ಮೊದಲ ಜಯದ ನಿರೀಕ್ಷೆಯಲ್ಲಿ ಡೈನಾಮೋಸ್‌

Published:
Updated:
Deccan Herald

ಗೋವಾ: ಇಂಡಿಯನ್‌ ಸೂಪರ್ ಲೀಗ್‌ (ಐಎಸ್‌ಎಲ್‌) ಐದನೇ ಆವೃತ್ತಿಯಲ್ಲಿ ಈ ವರೆಗೆ ಗೆಲುವು ಸಾಧಿಸದ ಎರಡು ತಂಡಗಳು ಡೆಲ್ಲಿ ಡೈನಾಮೋಸ್ ಮತ್ತು ಎಫ್‌ಸಿ ಪುಣೆ ಸಿಟಿ. ಏಳು ಪಂದ್ಯಗಳಲ್ಲಿ ಮೂರನ್ನು ಸೋತಿರುವ ಡೆಲ್ಲಿ ಡೈನಾಮೋಸ್ ಮೊದಲ ಜಯದ ನಿರೀಕ್ಷೆಯೊಂದಿಗೆ ಗುರುವಾರ ಕಣಕ್ಕೆ ಇಳಿಯಲಿದೆ.

ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಈ ತಂಡ ಆತಿಥೇಯ ಎಫ್‌ಸಿ ಗೋವಾವನ್ನು ಎದುರಿಸಲಿದೆ. ಗೋವಾ ತಂಡ ಈ ವರೆಗೆ ಒಟ್ಟು ಐದು ಪಂದ್ಯಗಳನ್ನು ಆಡಿದ್ದು ಒಂದರಲ್ಲಿ ಮಾತ್ರ ಸೋತಿದೆ. ಮೂರು ಪಂದ್ಯಗಳಲ್ಲಿ ಗೆದ್ದಿದೆ.

ಕಳೆದ ಪಂದ್ಯದಲ್ಲಿ ಜೆಮ್‌ಶೆಡ್‌ಪುರ ಎಫ್‌ಸಿಗೆ 1–4ರಿಂದ ಮಣಿದ ಕಾರಣ ತಂಡ ಮತ್ತೆ ಲಯಕ್ಕೆ ಮರಳುವ ಪ್ರಯತ್ನದಲ್ಲಿದೆ. ಡೆಲ್ಲಿ ವಿರುದ್ಧ ತಂಡ ಗೆದ್ದೇ ತೀರಲಿದೆ ಎಂದು ಕೋಚ್ ಸರ್ಜಿಯೊ ಲೊಬೆರಾ ವಿಶ್ವಾಸದಿಂದ ಹೇಳಿದ್ದಾರೆ.

ಗೋವಾ ತಂಡ ತವರಿನಲ್ಲಿ ಈ ವರೆಗೆ ಉತ್ತಮ ಸಾಮರ್ಥ್ಯ ತೋರಿದೆ. ಬಲಿಷ್ಠ ಎದುರಾಳಿಗಳನ್ನು ಮಣಿಸಿ ಸಂಭ್ರಮಿಸಿದೆ. ಗುರುವಾರದ ಪಂದ್ಯದಲ್ಲೂ ಅದೇ ರೀತಿಯ ಸಾಮರ್ಥ್ಯವನ್ನು ಮುಂದುವರಿಸುವುದು ತಂಡದ ಉದ್ದೇಶ.

ಒಂದು ಪಂದ್ಯದ ನಿಷೇಧದ ನಂತರ ಫೆರಾನ್ ಕೊರೊಮಿನಾಸ್‌ ತಂಡಕ್ಕೆ ಮರಳಿದ್ದಾರೆ. ಇದು ಕೋಚ್ ಮತ್ತು ಸಹ ಆಟಗಾರರ ವಿಶ್ವಾಸವನ್ನು ಹೆಚ್ಚಿಸಿದೆ. ಈ ಬಾರಿ ಕೊರೊಮಿನಾಸ್ ಒಟ್ಟು ಅರು ಗೋಲುಗಳನ್ನು ಗಳಿಸಿದ್ದು ನಾಲ್ಕು ಗೋಲುಗಳಿಗೆ ನೆರವಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !