ಭಾನುವಾರ, ಜನವರಿ 24, 2021
27 °C

ಡ್ರಾ ಪಂದ್ಯದಲ್ಲಿ ಈಸ್ಟ್ ಬೆಂಗಾಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೋವಾ: ಇಂಡಿಯನ್ ಸೂಪರ್ ಲೀಗ್ ಟೂರ್ನಿಯಲ್ಲಿ ಪಂದ್ಯ ಜಯಿಸುವ ಈಸ್ಟ್ ಬೆಂಗಾಲ್ ತಂಡದ ಮತ್ತೊಂದು ಪ್ರಯತ್ನಕ್ಕೆ ಫಲ ಸಿಗಲಿಲ್ಲ.

ತಿಲಕ್ ಮೈದಾನದಲ್ಲಿ ಗುರುವಾರ ನಡೆದ ಈಸ್ಟ್‌ ಬೆಂಗಾಲ್ ಮತ್ತು ಜೆಮ್‌ಶೆಡ್‌ಪುರ್ ಎಫ್‌ಸಿ ಮಧ್ಯ ನಡೆದ ಪಂದ್ಯವು ಗೋಲಿಲ್ಲದೇ ಡ್ರಾ ಆಯಿತು.

ಈಸ್ಟ್ ಬೆಂಗಾಲ್ ತಂಡವು ಇಲ್ಲಿಯವರೆಗೆ ಆಡಿರುವ ನಾಲ್ಕು ಪಂದ್ಯಗಳಲ್ಲಿ ಒಂದರಲ್ಲಿ ಸೋತು ಮೂರರಲ್ಲಿ ಡ್ರಾ ಮಾಡಿಕೊಂಡಿದೆ. ಪಾಯಿಂಟ್ ಪಟ್ಟಿಯ ಕೊನೆಯ ಸ್ಥಾನದಲ್ಲಿದೆ. ಐದು ಪಂದ್ಯಗಳನ್ನಾಡಿರುವ ಜೆಮ್‌ಶೆಡ್‌ಪುರ್ ತಂಡವು ಒಂದರಲ್ಲಿ ಗೆದ್ದಿದೆ. ಮೂರು ಡ್ರಾ ಮಾಡಿಕೊಂಡಿದೆ. ಅದರಿಂದಾಗಿ ಆರು ಪಾಯಿಂಟ್ಸ್‌ನೊಂದಿಗೆ ಐದನೇ ಸ್ಥಾನದಲ್ಲಿದೆ.

ಎರಡೂ ತಂಡಗಳ ನಡುವೆ ಬಿರುಸಿನ ಹಣಾಹಣಿ ಇತ್ತು. ಇದರಿಂದಾಗಿ ಕೆಲವು ಆಟಗಾರರಿಂದ ಒರಟು ಆಟ ಮತ್ತು ಕೆಟ್ಟ ನಡವಳಿಕೆಗಳು ಕಂಡುಬಂದವು. 

24ನೇ ನಿಮಿಷದಲ್ಲಿ ಬೆಂಗಾಲ್ ತಂಡದ ಪ್ರಮುಖ ಆಟಗಾರ ಯುಗೇನ್ಸನ್ ಲಿಂಗ್ದೊ ಕೆಂಪು ಕಾರ್ಡ್ ದರ್ಶನ ಮಾಡಿದರು. ಎದುರಾಳಿ ತಂಡದ ಲಾಲ್ದಿಮಿಲಾನಾ ರೆಂಥೆಲ್ (90+2) ಕೂಡ ಕೆಂಪು ಕಾರ್ಡ್‌ ನೋಡಬೇಕಾಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು