ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಯುರೋ ಕಪ್ ಫುಟ್‌ಬಾಲ್: ಇಂಗ್ಲೆಂಡ್‌ಗೆ ಮಣಿದ ಸ್ವಿಜರ್ಲೆಂಡ್‌

Published 6 ಜುಲೈ 2024, 22:43 IST
Last Updated 6 ಜುಲೈ 2024, 22:43 IST
ಅಕ್ಷರ ಗಾತ್ರ

ಡೆಸೆಲ್ ಡಾರ್ಫ್ ಜರ್ಮನಿ: ಇಂಗ್ಲೆಂಡ್ ತಂಡ ಶನಿವಾರ ಪೆನಾಲ್ಟಿ ಶೂಟೌಟ್‌ನಲ್ಲಿ ಸ್ವಿಜರ್ಲೆಂಡ್ ತಂಡವನ್ನು ಮಣಿಸಿ ಯುರೋ ಕಪ್ ಫುಟ್‌ಬಾಲ್ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿತು.

ಪಂದ್ಯ ನಿಗದಿ ಅವಧಿಯ ಆಟ 1–1 ರಲ್ಲಿ ಸಮಬಲಗೊಂಡ ನಂತರ ಪೆನಾಲ್ಟಿ ಶೂಟೌಟ್‌ನಲ್ಲಿ ಇಂಗ್ಲೆಂಡ್ 5–3 ರಿಂದ ಜಯ ಸಾಧಿಸಿತು. 

ಪಂದ್ಯದ 75ನೇ ನಿಮಿಷ ಬ್ರೀಲ್ ಎಂಬೊಲೊ ಸ್ವಿಜರ್ಲೆಂಡ್‌ಗೆ ಮುನ್ನಡೆ ಒದಗಿಸಿದರು. ಆದರೆ, ಬುಕಾಯೊ ಸಾಕಾ 80ನೇ ನಿಮಿಷದಲ್ಲಿ ಗೋಲು ಗಳಿಸಿ ಇಂಗ್ಲೆಂಡ್ ಸಮಬಲ ಸಾಧಿಸಲು ನೆರವಾದರು. 

ಫ್ರಾನ್ಸ್‌ಗೆ ಜಯ: ಮತ್ತೊಂದು ಪಂದ್ಯದಲ್ಲಿ ಪೆನಾಲ್ಟಿ ಶೂಟೌಟ್‌ನಲ್ಲಿ ಫ್ರಾನ್ಸ್ ತಂಡವು 5–3 ರಿಂದ ಪೋರ್ಚಗಲ್‌ ತಂಡವನ್ನು ಸೋಲಿಸಿ, ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT