ಶುಕ್ರವಾರ, ಮಾರ್ಚ್ 31, 2023
32 °C
ಆತಿಥೇಯ ತಂಡಕ್ಕೆ ತವರಿನ ಪ್ರೇಕ್ಷಕರ ಬೆಂಬಲ

ಯೂರೊ ಕಪ್ ಫುಟ್‌ಬಾಲ್ ಸೆಮಿಫೈನಲ್‌: ಇಂಗ್ಲೆಂಡ್‌ಗೆ ಡೆನ್ಮಾರ್ಕ್ ಸವಾಲು

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಲಂಡನ್‌: 55 ವರ್ಷಗಳ ಬಳಿಕ ಪ್ರಮುಖ ಟೂರ್ನಿಯೊಂದರ ಫೈನಲ್ ತಲುಪುವ ಹಂಬದಲ್ಲಿರುವ ಇಂಗ್ಲೆಂಡ್ ತಂಡವು ಯೂರೊ ಕಪ್ ಫುಟ್‌ಬಾಲ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಬುಧವಾರ ರಾತ್ರಿ ಡೆನ್ಮಾರ್ಕ್ ತಂಡವನ್ನು ಎದುರಿಸಲಿದೆ.

ತವರಿನಲ್ಲಿ ನಡೆದ 1966ರ ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್‌ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಫೈನಲ್ ಪಂದ್ಯದಲ್ಲಿ ಪಶ್ಚಿಮ ಜರ್ಮನಿಯನ್ನು ಪರಾಭವಗೊಳಿಸಿತ್ತು.

ಈ ಬಾರಿ ತವರಿನ ಪ್ರೇಕ್ಷಕರ ಅಪಾರ ಬೆಂಬಲದೊಂದಿಗೆ ವೆಂಬ್ಲಿ ಕ್ರೀಡಾಂಗಣದಲ್ಲಿ ಕಣಕ್ಕಿಳಿಯಲಿರುವ ತಂಡವು ಎದುರಾಳಿಗೆ ಸೋಲುಣಿಸುವ ಹಂಬಲದಲ್ಲಿದೆ. ಟೂರ್ನಿಯಲ್ಲಿ ನಿಧಾನಗತಿಯ ಆರಂಭ ಮಾಡಿದ್ದ ಹ್ಯಾರಿ ಕೇನ್ ನಾಯಕತ್ವದ ತಂಡವು ಬಳಿಕ ವೇಗದ ಆಟದ ಮೂಲಕ ಗಮನಸೆಳೆದಿದೆ.

ಪ್ರೀಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ 2-0ಯಿಂದ ಜರ್ಮನಿಯನ್ನು ಮಣಿಸಿದ್ದ ತಂಡವು, ಎಂಟರ ಘಟ್ಟದಲ್ಲಿ ಉಕ್ರೇನ್ಅನ್ನು 4–0ಯಿಂದ ಪರಾಭವಗೊಳಿಸಿತ್ತು.

ಇನ್ನೊಂದೆಡೆ 16ರ ಘಟ್ಟದ ಹಣಾಹಣಿಯಲ್ಲಿ ವೇಲ್ಸ್ ಎದುರು 4–0ಯಿಂದ ಜಯಿಸಿದ್ದ ಡೆನ್ಮಾರ್ಕ್‌, ಬಳಿಕ ನಡೆದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ 2–1ರಿಂದ ಜೆಕ್ ಗಣರಾಜ್ಯ ತಂಡವನ್ನು ಸೋಲಿಸಿ ನಾಲ್ಕರ ಘಟ್ಟ ತಲುಪಿದೆ.

ಆತಿಥೇಯ ತಂಡವನ್ನು ಮಣಿಸಿ ಪ್ರಶಸ್ತಿ ಸುತ್ತು ತಲುಪುವ ಕನಸಿನಲ್ಲಿ ಸೈಮನ್ ಜಾರ್ ಸಾರಥ್ಯದ ಡೆನ್ಮಾರ್ಕ್ ತಂಡವಿದೆ.

ಪಂದ್ಯ ಆರಂಭ: ರಾತ್ರಿ 12.30  (ಭಾರತೀಯ ಕಾಲಮಾನ)

ನೇರ ಪ್ರಸಾರ: ಸೋನಿ ನೆಟ್‌ವರ್ಕ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು