ಫುಟ್‌ಬಾಲ್: ಬೆಂಗಳೂರು ಯುನೈಟೆಡ್ ಜಯಭೇರಿ

ಬೆಂಗಳೂರು: ಸಿಂಗಂ ಸುಭಾಷ್ ಸಿಂಗ್ ಅವರ ಹ್ಯಾಟ್ರಿಕ್ ಗೋಲುಗಳ ಬಲದಿಂದ ಎಫ್‌ಸಿ ಬೆಂಗಳೂರು ಯುನೈಟೆಡ್ ತಂಡ ಬಿಡಿಎಫ್‌ಎ ಸೂಪರ್ ಡಿವಿಷನ್ ಫುಟ್‌ಬಾಲ್ ಲೀಗ್ ಚಾಂಪಿಯನ್‌ಷಿಪ್‌ನಲ್ಲಿ ಭರ್ಜರಿ ಜಯ ಗಳಿಸಿದರು.
ಎಎಸ್‌ಸಿ ಮತ್ತು ಸೆಂಟರ್ ಎಫ್‌ಸಿ ಎದುರಿನ ಪಂದ್ಯದಲ್ಲಿ ಬೆಂಗಳೂರು ತಂಡ 8–0 ಗೋಲುಗಳಿಂದ ಜಯ ಗಳಿಸಿತು. ವಿಜಯಿ ತಂಡದ ಪರವಾಗಿ ಲೂಕಾ ಮಜೇನ್ (14 ಮತ್ತು 45+1ನೇ ನಿಮಿಷ), ಬೆಡಾಶ್ವರ್ ಸಿಂಗ್ ಲೈಶ್ರಾಮ್ (45+3ನೇ ನಿ), ರೊನಾಲ್ಡೊ ಆಗಸ್ಟೊ ಆ್ಯಂಟೊನಿಯೊ (48ನೇ ನಿ), ಸಿಂಗಂ ಸುಭಾಷ್ ಸಿಂಗ್ (59, 69,78ನೇ ನಿ) ಮತ್ತು ಆನೆಮ್ ಗ್ರಫೆನ್ಬರ್ಗ್ ಜುರ್ವಾ (63ನೇ ನಿ) ಗೋಲು ಗಳಿಸಿದರು.
ಜವಾಹರ್ ಯೂನಿಯನ್ ಎಫ್‌ಸಿ ಮತ್ತು ಬೆಂಗಳೂರು ಈಗಲ್ಸ್ ಎಫ್‌ಸಿ ನಡುವಿನ ಪಂದ್ಯ 1–1ರಲ್ಲಿ ಡ್ರಾ ಆಯಿತು. ಜವಾಹರ್ ಪರವಾಗಿ ಸಿಯಾದುಲ್ ಅಸ್ಕರ್ 78ನೇ ನಿಮಿಷ ಮತ್ತು ಈಗಲ್ಸ್ ಪರ ಕ್ಲೀಟಸ್ ಡೊಮಿಮಿಕ್ ಜೇಕಬ್ ಪಾಲ್ 59ನೇ ನಿಮಿಷಗಳಲ್ಲಿ ಗೋಲು ಗಳಿಸಿದರು.
ಮಂಗಳವಾರ 11.45ಕ್ಕೆ ಬೆಂಗಳೂರು ಡ್ರೀಮ್ ಯುನೈಟೆಡ್ ಎಫ್‌ಸಿ ಮತ್ತು ಕಿಕ್‌ಸ್ಟಾರ್ಟ್ ಎಫ್‌ಸಿ, 1.45ಕ್ಕೆ ಥಾಂಕೋಸ್ ಸ್ಟೂಡೆಂಟ್ಸ್ ಯೂನಿಯನ್ ಎಫ್‌ಸಿ ಮತ್ತು ಬಿಎಫ್‌ಸಿ, 3.45ಕ್ಕೆ ಎಡಿಇ ಎಫ್‌ಸಿ ಮತ್ತು ಕೊಡಗು ಎಫ್‌ಸಿ ತಂಡಗಳು ಸೆಣಸಲಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.