ಬುಧವಾರ, ಆಗಸ್ಟ್ 4, 2021
21 °C

ಎಫ್‌ಸಿ ಗೋವಾ ತಂಡಕ್ಕೆ ಹನ್ಸೆಲ್‌, ವಿದ್ದೇಶ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಗೋವಾ: ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್‌ ಟೂರ್ನಿಯಲ್ಲಿ ಆಡುವ ಎಫ್‌ಸಿ ಗೋವಾ ತಂಡವು ಯುವ ಗೋಲ್‌ಕೀಪರ್‌ಗಳಾದ ಹನ್ಸೆಲ್‌ ಕೊಹ್ಲೊ ಹಾಗೂ ವಿದ್ದೇಶ್‌ ಭೋಸ್ಲೆ ಅವರೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ಒಪ್ಪಂದದ ಪ್ರಕಾರ ಈ ಇಬ್ಬರೂ ಆಟಗಾರರು 2022–23 ಋತುವಿನಲ್ಲಿ ಎಫ್‌ಸಿ ಗೋವಾ ಡೆವಲಪ್‌ಮೆಂಟ್ ತಂಡದ ಪರ ಕಣಕ್ಕಿಳಿಯಲಿದ್ದಾರೆ.

ಈ ಹಿಂದೆ ಎಸ್‌ಇಎಸ್‌ಎ ಫುಟ್‌ಬಾಲ್‌ ಅಕಾಡೆಮಿ ತಂಡದಲ್ಲಿದ್ದ ಈ ಜೋಡಿಯು ಗೋವಾ ಪ್ರೊ ಲೀಗ್‌ ಹಾಗೂ ಜಿಎಫ್‌ಎ 18 ವರ್ಷದೊಳಗಿನವರ ಟೂರ್ನಿಯಲ್ಲಿ ಉತ್ತಮ ಆಟವಾಡಿದ್ದರು.

‘ಹನ್ಸೆಲ್‌ ಹಾಗೂ ವಿದ್ದೇಶ್‌ ಅವರು ಹೆಚ್ಚಿನ ಸಾಮರ್ಥ್ಯ ಹೊಂದಿರುವ ಆಟಗಾರರಾಗಿದ್ದಾರೆ. ಹಲವು ವರ್ಷಗಳಿಂದ ನಾವು ಅವರ ಪ್ರಗತಿಯನ್ನು ಗಮನಿಸುತ್ತಿದ್ದೇವೆ. ಭವಿಷ್ಯದಲ್ಲಿ ಇವರಿಬ್ಬರಿಗೂ ಉತ್ತಮ ಗೋಲ್‌ಕೀಪರ್‌ಗಳಾಗುವ ಸಾಮರ್ಥ್ಯವಿದೆ’ ಎಂದು ಎಫ್‌ಸಿ ಗೋವಾ ತಂಡದ ನಿರ್ದೇಶಕ ರವಿ ಪುಷ್ಕರ್‌‌ ಹೇಳಿದ್ದಾರೆ.

ನೆಸ್ಟರ್‌ ಡಯಾಸ್‌, ಲೆಸ್ಲಿ ರೆಬೆಲ್ಲೊ ಹಾಗೂ ಕಪಿಲ್‌ ಹೋಬ್ಳೆ ಅವರ ಒಪ್ಪಂದವನ್ನು ವಿಸ್ತರಿಸಿದ ಬಳಿಕ ಹನ್ಸೆಲ್‌ ಮತ್ತು ವಿದ್ದೇಶ್‌ ಅವರೊಂದಿಗೆ ಒಪ್ಪಂದಕ್ಕೆ ಎಎಫ್‌ಸಿ ಗೋವಾ ಸಹಿ ಹಾಕಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು