ಶುಕ್ರವಾರ, ಜನವರಿ 24, 2020
28 °C

ಫಿಫಾ ವಿಶ್ವ ಕ್ರಮಾಂಕ ಪಟ್ಟಿ: 108ನೇ ಸ್ಥಾನದಲ್ಲಿ ಭಾರತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಭಾರತದ ಪುರುಷರ ಫುಟ್‌ಬಾಲ್‌ ತಂಡದವರು ವರ್ಷಾಂತ್ಯದ ಫಿಫಾ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 108ನೇ ಸ್ಥಾನ ಉಳಿಸಿಕೊಂಡಿದ್ದಾರೆ.

ಗುರುವಾರ ಪಟ್ಟಿ ಪ್ರಕಟವಾಗಿದ್ದು ಭಾರತದ ಖಾತೆಯಲ್ಲಿ 1,187 ಪಾಯಿಂಟ್ಸ್‌ ಇವೆ.

ಏಷ್ಯಾ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ತಂಡ 19ನೇ ಸ್ಥಾನ ಹೊಂದಿದೆ. ಜಪಾನ್‌ ತಂಡ ಅಗ್ರಪಟ್ಟ ಅಲಂಕರಿಸಿದೆ.

ಹೋದ ವರ್ಷದ ಡಿಸೆಂಬರ್‌ನಲ್ಲಿ ಬಿಡುಗಡೆಯಾಗಿದ್ದ ರ‍್ಯಾಂಕಿಂಗ್‌ನಲ್ಲಿ ಸುನಿಲ್‌ ಚೆಟ್ರಿ ಬಳಗ 97ನೇ ಸ್ಥಾನದಲ್ಲಿತ್ತು. ನಂತರ ತಂಡ ಹಂತ ಹಂತವಾಗಿ ಕುಸಿತ ಕಂಡಿತ್ತು.

ಬೆಲ್ಜಿಯಂ ತಂಡ ಅಗ್ರಪಟ್ಟದಲ್ಲಿದೆ. ಹೋದ ವರ್ಷ ನಡೆದಿದ್ದ ವಿಶ್ವಕಪ್‌ನಲ್ಲಿ ಈ ತಂಡ ರನ್ನರ್ಸ್‌ ಅಪ್‌ ಆಗಿತ್ತು.

ವಿಶ್ವ ಚಾಂಪಿಯನ್‌ ಫ್ರಾನ್ಸ್‌ ಎರಡನೇ ಸ್ಥಾನದಲ್ಲಿ ಮುಂದುವರಿದಿದ್ದು, ಬ್ರೆಜಿಲ್‌ ನಂತರದ ಸ್ಥಾನದಲ್ಲಿದೆ.

ಇಂಗ್ಲೆಂಡ್‌ ಮತ್ತು ಉರುಗ್ವೆ ತಂಡಗಳು ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನಗಳಲ್ಲಿವೆ. ಉರುಗ್ವೆ ತಂಡ ಎರಡು ಸ್ಥಾನ ಬಡ್ತಿ ಹೊಂದಿದೆ.

ಕ್ರೊವೇಷ್ಯಾ, ಪೋರ್ಚುಗಲ್‌, ಸ್ಪೇನ್‌, ಅರ್ಜೆಂಟೀನಾ ಮತ್ತು ಕೊಲಂಬಿಯಾ ತಂಡಗಳು ಕ್ರಮವಾಗಿ ಐದರಿಂದ ಹತ್ತನೇ ಸ್ಥಾನಗಳಲ್ಲಿವೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು