ಫತೋರ್ಡ: ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) ಫುಟ್ಬಾಲ್ ಟೂರ್ನಿಯ ಹೊಸ ಚಾಂಪಿಯನ್ ಯಾರು ಎಂಬ ಕುತೂಹಲಕ್ಕೆ ಭಾನುವಾರ ರಾತ್ರಿ ತೆರೆ ಬೀಳಲಿದೆ.

ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆಯಲಿರುವ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ದಕ್ಷಿಣ ರಾಜ್ಯಗಳ ಪ್ರಬಲ ತಂಡಗಳಾದ ಕೇರಳ ಬ್ಲಾಸ್ಟರ್ಸ್ ಮತ್ತು ಹೈದರಾಬಾದ್ ಎಫ್ಸಿ ಮುಖಾಮುಖಿಯಾಗಲಿವೆ. ಪಂದ್ಯದಲ್ಲಿ ಯಾರು ಗೆದ್ದರೂ ಮೊದಲ ಬಾರಿ ಪ್ರಶಸ್ತಿ ಗಳಿಸಿದ ಸಾಧನೆಯಾಗಲಿದೆ.

ಲೀಗ್ ಉದ್ದಕ್ಕೂ ಅಮೋಘ ಸಾಧನೆ ಮಾಡಿರುವ ಹೈದರಾಬಾದ್ ಎಫ್ಸಿ ಇದೇ ಮೊದಲ ಬಾರಿ ಫೈನಲ್ ಪ್ರವೇಶಿಸಿದೆ. ಲೀಗ್ ಹಂತದ ಪಾಯಿಂಟ್ ಪಟ್ಟಿಯಲ್ಲಿ ತಂಡ 38 ಪಾಯಿಂಟ್ಗಳೊಂದಿಗೆ ಎರಡನೇ ಸ್ಥಾನ ಗಳಿಸಿತ್ತು. ಲೀಗ್ನಲ್ಲಿ ಸಿಹಿ–ಕಹಿ ಅನುಭವಿಸುತ್ತ ಬಂದಿರುವ ಕೇರಳ ಬ್ಲಾಸ್ಟರ್ಸ್ ತಂಡಕ್ಕೆ ಇದು ಮೂರನೇ ಫೈನಲ್.

2014 ಮತ್ತು 2016ರಲ್ಲಿ ಕೇರಳ ಬ್ಲಾಸ್ಟರ್ಸ್ ಫೈನಲ್ ಪ್ರವೇಶಿಸಿತ್ತು. ಎರಡೂ ಸಂದರ್ಭದಲ್ಲಿ ಎಟಿಕೆ ಮೋಹನ್ ಬಾಗನ್ ತಂಡಕ್ಕೆ ಮಣಿದು ರನ್ನರ್ ಅಪ್ ಸ್ಥಾನಕ್ಕೆ ಸಮಾಧಾನಪಟ್ಟುಕೊಂಡಿತ್ತು. ಎರಡು ಲೆಗ್ಗಳ ಸೆಮಿಫೈನಲ್ನಲ್ಲಿ ಎಟಿಕೆ ಮೋಹನ್ ಬಾಗನ್ ತಂಡವನ್ನು 3–2ರಲ್ಲಿ ಸೋಲಿಸಿ ಹೈದರಾಬಾದ್ ಎಫ್ಸಿ ಫೈನಲ್ ಪ್ರವೇಶಿಸಿದೆ.

ಟೂರ್ನಿಯುದ್ದಕ್ಕೂ ಮಿಂಚಿರುವ ಬಾರ್ತೊಲೋಮೆ ಒಗ್ಬೆಚೆ ಸೆಮಿಫಯನಲ್ನಲ್ಲೂ ಹೈದರಾಬಾದ್ ಎಫ್ಸಿಯ ಕೈ ಹಿಡಿದಿದ್ದರು. ಯಾಸಿರ್ ಮೊಹಮ್ಮದ್ ಮತ್ತು ಜೇವಿಯರ್ ಸಿವೆರಿಯೊ ಕೂಡ ಸೆಮಿಫೈನಲ್ನಲ್ಲಿ ಮಿಂಚಿದ್ದಾರೆ. ಫೈನಲ್ ಪಂದ್ಯದಲ್ಲಿಯೂ ಅವರ ಮೇಲೆ ನಿರೀಕ್ಷೆ ಇದೆ.

ಪಾಯಿಂಟ್ ಪಟ್ಟಿಯಲ್ಲಿ ಅಗ್ರ ಸ್ಥಾನ ಗಳಿಸಿ ಲೀಗ್ ಟ್ರೋಫಿ ತನ್ನದಾಗಿಸಿಕೊಂಡಿರುವ ಜೆಮ್ಶೆಡ್ಪುರ್ ಎಫ್ಸಿ ವಿರುದ್ಧ ಸಮಿಫೈನಲ್ನಲ್ಲಿ ಪಾರಮ್ಯ ಮೆರೆದು ಕೇರಳ ಫೈನಲ್ ಪ್ರವೇಶಿಸಿತ್ತು. ಸಹಲ್ ಅಬ್ದುಲ್ ಸಮದ್ ಅವರು ತಂಡದ ನೆರವಿಗೆ ಬಂದಿದ್ದರು. ಫೈನಲ್ನಲ್ಲಿ ಕೇರಳದ ರಕ್ಷಣಾ ವಿಭಾಗ ಮತ್ತು ಹೈದರಾಬಾದ್ನ ಆಕ್ರಮಣ ವಿಭಾಗದ ನಡುವೆ ಜಿದ್ದಾಜಿದ್ದಿಯ ಹೋರಾಟ ನಿರೀಕ್ಷಿಸಲಾಗಿದೆ.

ಹೈದರಾಬಾದ್ ಎಫ್ಸಿಗೆ ಉತ್ತಮ ಮಿಡ್ಫೀಲ್ಡ್ ವಿಭಾಗದ ಬೆಂಬಲವೂ ಇದೆ. ಅನಿಕೇತ್ ಜಾಧವ್, ಹಲಿಚರಣ್ ನಜರೆ, ಸೌವಿಕ್ ಚಕ್ರವರ್ತಿ ಮುಂತಾದವರು ಈ ವಿಭಾಗದ ಆಧಾರಸ್ತಂಭವಾಗಿದ್ದಾರೆ. ಗೋಲ್ ಕೀಪರ್ ಲಕ್ಷ್ಮಿಕಾಂತ್ ಕಟ್ಟಿಮನಿ ಮತ್ತೊಮ್ಮೆ ಕ್ಲೀನ್ಶೀಟ್ ಸಾಧನೆ ಮೇಲೆ ಕಣ್ಣಿಟ್ಟಿದ್ದಾರೆ.

ಈ ಬಾರಿ ಅತಿ ಹೆಚ್ಚು ಗೋಲು ಗಳಿಸಿದ ಸಾಧನೆ ಹೈದರಾಬಾದ್ ತಂಡ ಮಾಡಿದೆ. ಒಟ್ಟು 46 ಗೋಲುಗಳು ಆ ತಂಡದ ಖಾತೆಯಲ್ಲಿದ್ದು ಕೇರಳ 36 ಗೋಲು ಗಳಿಸಿದೆ. ಜಾರ್ಜ್ ಪೆರೇರ ಡಯಾಸ್ ಮತ್ತು ಅಲ್ವಾರೊ ವಜ್ಕಿಜ್ ಮಿಂಚಿದರೆ ಫೈನಲ್ನಲ್ಲಿ ಕೇರಳದ ಗೋಲು ಗಳಿಕೆಗೆ ಬಲ ತುಂಬಲಿದೆ. ಸಹಲ್ ಅಬ್ದುಲ್ ಸಮದ್ ಗಾಯಗೊಂಡಿದ್ದರೂ ಕಣಕ್ಕೆ ಇಳಿಯುವುದು ಖಚಿತವಾಗಿದೆ.

ಆರಂಭ: ರಾತ್ರಿ 7.30

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.