ಭಾನುವಾರ, ಸೆಪ್ಟೆಂಬರ್ 20, 2020
23 °C

ಗೋಲ್‌ಕೀಪರ್ ಕತ್ತು ಹಿಡಿದ ಆಟಗಾರ ಅಮಾನತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಲಾಸ್ ಏಂಜಲೀಸ್‌ (ಎಎಫ್‌ಪಿ): ಗೋಲ್‌ಕೀಪರ್‌ ಕತ್ತು ಹಿಡಿದ ಫುಟ್‌ಬಾಲ್ ಆಟಗಾರ ಲತಾನ್ ಇಬ್ರಹಿಮೊವಿಚ್ ಅವರನ್ನು ಎರಡು ಪಂದ್ಯಗಳಿಂದ ಅಮಾನತು ಮಾಡಲಾಗಿದೆ.

ಮೇ 11ರಂದು ನಡೆದ ಮೇಜರ್ ಲೀಗ್ ಸಾಕರ್‌ (ಎಂಎಲ್‌ಎಸ್‌) ಫುಟ್‌ಬಾಲ್ ಟೂರ್ನಿಯ ಪಂದ್ಯದಲ್ಲಿ ಲಾಸ್ ಏಂಜಲೀಸ್ ಗ್ಯಾಲಕ್ಸಿ ತಂಡದ ಪರ ಕಣಕ್ಕೆ ಇಳಿದಿದ್ದ ಇಬ್ರಹಿಮೊವಿಚ್‌ ನ್ಯೂಯಾರ್ಕ್‌ ಸಿಟಿ ಎಫ್‌ಸಿ ತಂಡದ ಗೋಲ್‌ಕೀಪರ್‌ ಸೀನ್ ಜಾನ್ಸನ್ ಅವರ ಕತ್ತು ಹಿಡಿದಿದ್ದರು.

ಇಬ್ರಹಿಮೊವಿಚ್ ಎದುರಾಳಿ ತಂಡದ ಗೋಲ್‌ಕೀಪರ್‌ನ ಕತ್ತು ಹಿಡಿದಿದ್ದರು. ಇದು, ನಿಯಮಾವಳಿಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಆದ್ದರಿಂದ ಅವರಿಗೆ ಅಮಾನತು ಶಿಕ್ಷೆ ವಿಧಿಸಲಾಗಿದೆ ಎಂದು ಎಂಎಲ್‌ಎಸ್‌ ಶಿಸ್ತು ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ಪಂದ್ಯದ 86ನೇ ನಿಮಿಷದಲ್ಲಿ ಇಬ್ರಹಿಮೊವಿಚ್ ಮತ್ತು ಜಾನ್ಸನ್ ಕೈ ಕೈ ಮಿಲಾಯಿಸಿ ನೆಲದ ಮೇಲೆ ಬಿದ್ದಿದ್ದರು. ಕ್ರೀಡಾಸ್ಫೂರ್ತಿ ಮರೆತು ಈ ರೀತಿ ವರ್ತಿಸಿದ್ದಕ್ಕೆ ಇಬ್ಬರಿಗೂ ಹಳದಿ ಕಾರ್ಡ್‌ ತೋರಿಸಲಾಗಿತ್ತು. ಪಂದ್ಯದಲ್ಲಿ ಗ್ಯಾಲಕ್ಸಿ 0–2ರಿಂದ ಸೋತಿತ್ತು. ಇಬ್ರಹಿಮೊವಿಚ್‌ ಕಾಲು ಕೆರೆದುಕೊಂಡು ಬಂದು ಜಗಳವಾಡಿದ್ದರು ಎಂದು ಪಂದ್ಯದ ನಂತರ ಜಾನ್ಸನ್ ದೂರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು