ಮಂಗಳವಾರ, 6 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫುಟ್‌ಬಾಲ್‌: ರಚನಾ ಹ್ಯಾಟ್ರಿಕ್‌ ಗೋಲು

Last Updated 15 ಸೆಪ್ಟೆಂಬರ್ 2021, 16:52 IST
ಅಕ್ಷರ ಗಾತ್ರ

ಬೆಂಗಳೂರು: ರಚನಾ ಗಳಿಸಿದ ಹ್ಯಾಟ್ರಿಕ್ ಗೋಲುಗಳ ಬಲದಿಂದ ಪಿಂಕ್ ಪ್ಯಾಂಥರ್ಸ್ ತಂಡವು ಕೆಎಸ್‌ಎಫ್‌ಎ ಸ್ಪೋರ್ಟಿಂಗ್ ಪ್ಲಾನೆಟ್‌ ಟ್ರೋಫಿ ಮಹಿಳಾ ಫುಟ್‌ಬಾಲ್‌ ಟೂರ್ನಿಯಲ್ಲಿ ಭರ್ಜರಿ ಜಯ ಗಳಿಸಿತು.

ಬೆಂಗಳೂರು ಫುಟ್‌ಬಾಲದ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಪಿಂಕ್‌ ಪ‍್ಯಾಂಥರ್ಸ್‌ 7–0 ಗೋಲುಗಳಿಂದ ಸಾಯ್ ಸ್ಪೋರ್ಟ್ಸ್ ಅಕಾಡೆಮಿ ತಂಡವನ್ನು ಸೋಲಿಸಿತು. ವಿಜೇತ ತಂಡದ ರಚನಾ 20, 32 ಮತ್ತು 60ನೇ ನಿಮಿಷಗಳಲ್ಲಿ ಗೋಲು ದಾಖಲಿಸಿದರೆ, ಅಂಶಿತಾ (14 ಮತ್ತು 30ನೇ ನಿ.) ಮತ್ತು ನೂತನಾ (23 ಮತ್ತು 53ನೇ ನಿ.) ತಲಾ ಎರಡು ಗೋಲು ಹೊಡೆದರು. ಮತ್ತೊಂದು ಪಂದ್ಯದಲ್ಲಿ ಮೈತ್ರೇಯಿ (29 ಮತ್ತು 46ನೇ ನಿ.) ಮತ್ತು ತ್ರೇಜಾ (43 ಮತ್ತು 53ನೇ ನಿ.) ದಾಖಲಿಸಿದ ಗೋಲುಗಳ ನೆರವಿನಿಂದ 4–2ರಿಂದ ಪಯೋ ನಿಯರ್ಸ್ ಎಫ್‌ಸಿಯನ್ನು ಸೋಲಿಸಿತು. ಪಯೋನಿಯರ್ಸ್ ಪರ ಪ್ರಿಯಾ ಮತ್ತು ಶ್ರಾವಣಿ ಕಾಲ್ಚಳಕ ತೋರಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT