ಗುರುವಾರ , ಡಿಸೆಂಬರ್ 3, 2020
23 °C

ಸೌಮ್ಯಾ ಹ್ಯಾಟ್ರಿಕ್‌: ಕೆಂಕ್ರೆಗೆ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಾಯಕಿ ಸೌಮ್ಯಾ ಗುಗುಲೊಥ್‌ ಸಾಧಿಸಿದ ಹ್ಯಾಟ್ರಿಕ್‌ ನೆರವಿನಿಂದ ಮುಂಬೈನ ಕೆಂಕ್ರೆ ಎಫ್‌ಸಿ ತಂಡ ಒಡಿಶಾ ಪೊಲೀಸ್‌ ತಂಡದ ಎದುರು 4–1ರಿಂದ ಜಯಸಿತು. ಮಹಿಳೆಯರ ರಾಷ್ಟ್ರೀಯ ಫುಟ್‌ಬಾಲ್‌ ಲೀಗ್‌ನ ಬಿ ಗುಂಪಿನ ಪಂದ್ಯದಲ್ಲಿ ಶನಿವಾರ ಸೌಮ್ಯಾ 25, 39 ಹಾಗೂ 69ನೇ ನಿಮಿಷದಲ್ಲಿ ಯಶಸ್ಸು ಕಂಡರು.

ಇಲ್ಲಿಯ ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ, ವಿಜೇತ ತಂಡದ ಪರ ಮತ್ತೊಂದು ಗೋಲನ್ನು ಸಮೀಕ್ಷಾ (45+1ನೇ ನಿಮಿಷ) ಹೊಡೆದರು. ಒಡಿಶಾ ಪೊಲೀಸ್‌ ತಂಡದ ಜಬಾಮಣಿ ಸೋರೆನ್‌ 87ನೇ ನಿಮಿಷದಲ್ಲಿ ತಮ್ಮ ತಂಡಕ್ಕೆ ಸಮಾಧಾನದ ಗೋಲು ಗಳಿಸಿಕೊಟ್ಟರು.

‘ಎ’ ಗುಂಪಿನ ಪಂದ್ಯದಲ್ಲಿ ಬರೋಡಾ ಎಫ್‌ಎ ತಂಡವು ಬಿಬಿಕೆ ಡಿಎವಿ ಎಫ್‌ಸಿ ಪಂಜಾಬ್‌ ತಂಡವನ್ನು 3–0ಯಿಂದ ಸದೆಬಡಿಯಿತು. ಬರೋಡಾ ಪರ ಸುಶ್ಮಿತಾ ಲೆಪ್‌ಚಾ (63ನೇ ನಿಮಿಷ) ಹಾಗೂ ಆಕಾಂಕ್ಷಾ ಕಂಡಾಳ್ಕರ್‌ (78ನೇ ನಿಮಿಷ) ಕಾಲ್ಚಳಕ ತೋರಿದರು. ಎದುರಾಳಿ ತಂಡದ ಮಹಿಮಾ ಬಿಷ್ಣೋಯಿ ಅವರಿಂದ ಒಂದು ಉಡುಗೊರೆ ಗೋಲು ಬಂದಿತು.

ಇಂದಿನ ಪಂದ್ಯಗಳು

ಬಿದೇಶ್‌ ಇಲೆವನ್ ಸ್ಪೋರ್ಟ್ಸ್ ಕ್ಲಬ್‌– ಬೆಂಗಳೂರು ಯುನೈಟೆಡ್‌ ಎಫ್‌ಸಿ 

ಆರಂಭ: ಮಧ್ಯಾಹ್ನ 12

ಗೋಕುಲಂ ಕೇರಳ ಎಫ್‌ಸಿ– ಶ್ರೀ ಭೂಮಿ ಎಫ್‌ಸಿ ಪಶ್ಚಿಮ ಬಂಗಾಳ

ಆರಂಭ: ಮಧ್ಯಾಹ್ನ 3

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು