ಶನಿವಾರ, ಮೇ 30, 2020
27 °C

ಕೊರೊನಾ ವಿರುದ್ಧ ಹೋರಾಟ | ಆಸ್ಪತ್ರೆಗಳಿಗಾಗಿ ಅಭಿಯಾನ ಆರಂಭಿಸಿದ ಫುಟ್‌ಬಾಲ್ ಲೀಗ್

ಎಪಿ Updated:

ಅಕ್ಷರ ಗಾತ್ರ : | |

ಪ್ಯಾರಿಸ್: ಕೊರೊನಾ ವೈರಾಣು ವಿರುದ್ಧದ ಹೋರಾಟದಲ್ಲಿ ತೊಡಗಿರುವ ಆಸ್ಪತ್ರೆಗಳಿಗೆ ಆರ್ಥಿಕ ನೆರವು ನೀಡುವುದಕ್ಕಾಗಿ ಫ್ರಾನ್ಸ್‌ನ ಫುಟ್‌ಬಾಲ್ ಲೀಗ್ ಒಂದರ ಆಯೋಜಕರು ಅಭಿಯಾನ ಆರಂಭಿಸಿದ್ದಾರೆ. 

‘ವೈರಸ್ ಎದುರು ಸಂಘಟಿತ ಹೋರಾಟ’ ಎಂಬ ಘೋಷವಾಕ್ಯದೊಂದಿಗೆ ನಡೆಯುತ್ತಿರುವ ಅಭಿಯಾನದಲ್ಲಿ ಆನ್‌ಲೈನ್ ಮೂಲಕ ನಿರ್ದಿಷ್ಟ ಮೊತ್ತ ಪಾವತಿಸಿದರೆ ಫುಟ್‌ಬಾಲ್ ಅಭಿಮಾನಿಗಳಿಗೆ ಆಟಗಾರರ ಸಹಿ ಇರುವ ಜೆರ್ಸಿ ಸಿಗಲಿದೆ. ಫ್ರಾನ್ಸ್‌ನ ಪ್ಯಾರಿಸ್ ಸೇಂಟ್ ಜರ್ಮನ್‌ ಜೆರ್ಸಿಯಲ್ಲಿ ಕಲಿಯನ್ ಬಾಪೆ ಮತ್ತು ಎಡಿನ್ಸನ್ ಕವಾನಿ ಅವರ ಸಹಿ ಇದೆ. ಮಾರ್ಸೆಲಿ ತಂಡದ ಜೆರ್ಸಿ ಮೇಲೆ ದಿಮಿತ್ರಿ ಪೇಯೆಟ್ ಅವರ ಸಹಿಯೂ ಲಯನ್ಸ್‌ ಜೆರ್ಸಿಯಲ್ಲಿ ಹೋಸೆಮ್ ಅವರ್ ಸಹಿಯೂ ಇದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು