ಶನಿವಾರ, ಸೆಪ್ಟೆಂಬರ್ 25, 2021
24 °C

11ರಿಂದ ಕರ್ನಾಟಕ ರಾಜ್ಯ ಫುಟ್‌ಬಾಲ್ ಸಂಸ್ಥೆಯ ಫುಟ್‌ಸಾಲ್ ಲೀಗ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ನಾಟಕ ರಾಜ್ಯ ಫುಟ್‌ಬಾಲ್ ಸಂಸ್ಥೆಯು (ಕೆಎಸ್‌ಎಫ್‌ಎ) ಮೊದಲ ಬಾರಿ ಆಯೋಜಿಸುತ್ತಿರುವ ಫುಟ್‌ಸಾಲ್ ಲೀಗ್‌ ಸೆಪ್ಟೆಂಬರ್‌ 11ರಿಂದ ನಡೆಯಲಿದೆ.

ಇಲ್ಲಿಯ ಪಡುಕೋಣೆ–ದ್ರಾವಿಡ್‌ ಸ್ಪೋರ್ಟ್ಸ್‌ ಎಕ್ಸ್‌ಲೆನ್ಸ್‌ನಲ್ಲಿ ನಡೆಯ ಲಿರುವ ಟೂರ್ನಿಗೆ ಎಂಟು ಕ್ಲಬ್‌ಗಳು ಭಾಗವಹಿಸುವುದಾಗಿ ಖಚಿತಪಡಿಸಿವೆ.

ಈ ಟೂರ್ನಿಯಲ್ಲಿ ಚಾಂಪಿಯನ್ ಆದ ತಂಡವು ಶಿಲ್ಲಾಂಗ್‌ನಲ್ಲಿ ಡಿಸೆಂಬರ್‌ನಲ್ಲಿ ನಡೆಯಲಿರುವ ರಾಷ್ಟ್ರೀಯ ಫೈನಲ್ಸ್‌ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿದೆ ಎಂದು ಕೆಎಸ್‌ಎಫ್‌ಎ ಗೌರವ ಪ್ರಧಾನ ಕಾರ್ಯದರ್ಶಿ ಎಂ.ಸತ್ಯನಾರಾಯಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಫುಟ್‌ಸಾಲ್‌ ಐದು ಮಂದಿ ಆಡುವ ಫುಟ್‌ಬಾಲ್‌. ಪ್ರತಿ ತಂಡದಲ್ಲಿ ತಲಾ 5 ಮಂದಿ ಮಾತ್ರ ಇರುತ್ತಾರೆ. ಸಾಮಾನ್ಯ ಪಿಚ್‌ಗಿಂತ ಈ ಆಟದ ಪಿಚ್‌ ಚಿಕ್ಕದಾಗಿರುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು