ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಪಾ ಅಮೆರಿಕ: ಕೊಲಂಬಿಯಾಗೆ ಮೂರನೇ ಸ್ಥಾನ

Last Updated 10 ಜುಲೈ 2021, 14:44 IST
ಅಕ್ಷರ ಗಾತ್ರ

ಬ್ರೆಸಿಲಿಯಾ, ಬ್ರೆಜಿಲ್‌: ಲೂಯಿಸ್ ದಿಯಾಜ್ ಗಳಿಸಿದ ಎರಡು ಗೋಲುಗಳ ನೆರವಿನಿಂದ ಕೊಲಂಬಿಯಾ ತಂಡವು ಪೆರು ತಂಡವನ್ನು ಮಣಿಸಿ ಕೊಪಾ ಅಮೆರಿಕ ಫುಟ್‌ಬಾಲ್ ಟೂರ್ನಿಯಲ್ಲಿ ಮೂರನೇ ಸ್ಥಾನ ಗಳಿಸಿತು.

ಇಲ್ಲಿ ನಡೆದ ಹಣಾಹಣಿಯಲ್ಲಿ ಕೊಲಂಬಿಯಾಕ್ಕೆ 3–2ರಿಂದ ಜಯ ಒಲಿಯಿತು. ಪಂದ್ಯದಲ್ಲಿ ಪೆರು ಗೋಲಿನ ಖಾತೆ ತೆರೆಯಿತು. 28ನೇ ನಿಮಿಷದಲ್ಲಿ ಯೋಶಿಮರ್ ಯೋಟುನ್‌ ಅವರು ಕ್ರಿಸ್ಟಿಯನ್ ಕ್ಯುವಾ ನೆರವಿನೊಂದಿಗೆ ಮೊದಲ ಗೋಲು ದಾಖಲಿಸಿದರು.

49ನೇ ನಿಮಿಷದಲ್ಲಿ ಎದುರಾಳಿ ಗೋಲ್‌ಕೀಪರ್‌ ಪೆಡ್ರೊ ಗ್ಯಾಲೆಸ್‌ ಅವರನ್ನು ವಂಚಿಸಿದ ಕೊಲಂಬಿಯಾ ತಂಡದ ಜುವಾನ್ ಗಿಲೆರ್ಮೊ ಕ್ವಾಡ್ರಾಡೊ ಸಮಬಲದ ಗೋಲು ಹೊಡೆದರು.

ಈ ಹಂತದಲ್ಲಿ ಆಟ ಇನ್ನಷ್ಟು ರಂಗೇರಿತು. 66ನೇ ನಿಮಿಷದಲ್ಲಿ ತಮ್ಮ ಮೊದಲ ಗೋಲು ದಾಖಲಿಸಿದ ದಿಯಾಜ್, ಕೊಲಂಬಿಯಾ ತಂಡವು 2–1ರಿಂದ ಮುನ್ನಡೆಯುವಂತೆ ಮಾಡಿದರು.

82ನೇ ನಿಮಿಷದಲ್ಲಿ ಹೆಡರ್‌ ಮೂಲಕ ಗೋಲು ಹೊಡೆದ ಪೆರು ತಂಡದ ಗಿಯಾನ್‌ಲೂಕಾ ಲಾಪಡುಲಾ ಹಣಾಹಣಿಯನ್ನು ಸಮಬಲಕ್ಕೆ ತಂದರು.

ಹೆಚ್ಚುವರಿ ಸಮಯದಲ್ಲಿದಿಯಾಜ್‌ ಮತ್ತೊಂದು ಗೋಲು ದಾಖಲಿಸಿದಾಗ ಕೊಲಂಬಿಯಾ ತಂಡದ ಗೆಲುವಿನ ಸಂಭ್ರಮ ಮುಗಿಲು ಮುಟ್ಟಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT