ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡಿಯನ್ ಸೂಪರ್ ಲೀಗ್ ವೀಕ್ಷಕರ ಸಂಖ್ಯೆ ವೃದ್ಧಿ

Last Updated 2 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ

ನವದೆಹಲಿ: ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್‌ ಟೂರ್ನಿಯನ್ನು ವೀಕ್ಷಿಸಿದವರ ಸಂಖ್ಯೆ ಆರನೇ ಆವೃತ್ತಿಯಲ್ಲಿ ಶೇಕಡಾ 51 ಏರಿಕೆ ಕಂಡಿದೆ. ಕಳೆದ ವರ್ಷದ ಅಕ್ಟೋಬರ್‌ 20ರಂದು ನಡೆದಿದ್ದ ಕೇರಳ ಬ್ಲಾಸ್ಟರ್ಸ್‌ ಮತ್ತು ಎಟಿಕೆ ನಡುವಿನ ಮೊದಲ ಪಂದ್ಯವನ್ನು ಐದನೇ ಆವೃತ್ತಿಯ ಮೊದಲ ಪಂದ್ಯ ವೀಕ್ಷಿಸಿದವರಿಗೆ ಹೋಲಿಸಿದರೆ ದುಪ್ಪಟ್ಟು ವೀಕ್ಷಕರು ಆಸ್ವಾದಿಸಿದ್ದಾರೆ.

‘ಟೂರ್ನಿಯ ಆರನೇ ಆವೃತ್ತಿಯ ಪಂದ್ಯಗಳನ್ನು ಸ್ಟಾರ್‌ ಸ್ಪೋರ್ಟ್ಸ್ ಮತ್ತು ಸ್ಟಾರ್ ಇಂಡಿಯಾ ನೆಟ್‌ವರ್ಕ್‌ನ 11 ಚಾನಲ್‌ಗಳು ಏಳು ಭಾಷೆಗಳಲ್ಲಿ ಪ್ರಸಾರ ಮಾಡಿವೆ. ಡಿಜಿಟಲ್ ಮಾಧ್ಯಮಗಳಾದ ಹಾಟ್‌ ಸ್ಟಾರ್ ಮತ್ತು ಜಿಯೊ ಟಿವಿಗಳಲ್ಲೂ ಪ್ರಸಾರಗೊಂಡಿವೆ. ಕೊನೆಯಲ್ಲಿ ವೀಕ್ಷಕರ ಸಂಖ್ಯೆ ಶೇಕಡಾ 51 ಏರಿಕೆ ಕಂಡಿದೆ ಎಂಬುದು ಬಿಎಆರ್‌ಸಿ ನೀಡಿದ ವರದಿಯಿಂದ ತಿಳಿದಿದೆ’ ಎಂದು ಐಎಸ್‌ಎಲ್‌ ಪ್ರಕಟಣೆ ತಿಳಿಸಿದೆ.

ಫೈನಲ್‌ನಲ್ಲಿ ಚೆನ್ನೈಯಿನ್ ಎಫ್‌ಸಿ ತಂಡವನ್ನು ಮಣಿಸಿ ಎಟಿಕೆ ಆರನೇ ಆವೃತ್ತಿಯ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT