ಗುರುವಾರ , ಜನವರಿ 28, 2021
18 °C

ಹೈದರಾಬಾದ್‌–ಜೆಎಫ್‌ಸಿ ಪಂದ್ಯ ಡ್ರಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಾಸ್ಕೊ: ಪಂದ್ಯದ ಕೊನೆಯ ಹಂತದಲ್ಲಿ ಗೋಲು ಗಳಿಸಿದ ಸ್ಟೀಫನ್‌ ಎಜೆ ಅವರು ಜಮ್ಶೆಡ್‌ಪುರ ಎಫ್‌ಸಿ (ಜೆಎಫ್‌ಸಿ) ತಂಡವು ಹೈದರಾಬಾದ್ ಎಫ್‌ಸಿಯೊಡನೆ ಡ್ರಾ ಸಾಧಿಸಲು ನೆರವಾದರು. ಇಲ್ಲಿಯ ತಿಲಕ್‌ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಇಂಡಿಯನ್‌ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್‌ ಟೂರ್ನಿಯ ಹಣಾಹಣಿಯಲ್ಲಿ ಉಭಯ ತಂಡಗಳು 1–1ರ ಸಮಬಲ ಸಾಧಿಸಿದವು.

ಹೈದರಾಬಾದ್‌ ಪರ ಅರಿದಾನೆ ಸಂಟಾನಾ 50ನೇ ನಿಮಿಷದಲ್ಲಿ ಸೊಗಸಾದ ಗೋಲು ಗಳಿಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು. 87ನೇ ನಿಮಿಷದಲ್ಲಿ ಸ್ಟೀಪನ್‌ ಎಜೆ ಅವರು ಲಾಲ್‌ನುನ್ಫೆಲಾ ಅವರ ನೆರವಿನೊಂದಿಗೆ ಗೋಲು ದಾಖಲಿಸಿ ಪಂದ್ಯದ ಸಮಬಲಕ್ಕೆ ಕಾರಣರಾದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು