ಶನಿವಾರ, ಸೆಪ್ಟೆಂಬರ್ 24, 2022
21 °C

ಸ್ಯಾಫ್‌ ಯುವ ಫುಟ್‌ಬಾಲ್ ಚಾಂಪಿಯನ್‌ಷಿಪ್‌: ಭಾರತ ತಂಡ ಪ್ರಕಟ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಭುವನೇಶ್ವರ: ಸ್ಯಾಫ್ 20 ವರ್ಷದೊಳಗಿನವರ ಫುಟ್‌ಬಾಲ್ ಚಾಂಪಿಯನ್‌ಷಿಪ್‌ಗೆ ಭಾರತದ 23 ಆಟಗಾರರ ತಂಡವನ್ನು ಶನಿವಾರ ಪ್ರಕಟಿಸಲಾಗಿದೆ.

ಭಾರತ ತಂಡವು ಬಹುತೇಕ ಎರಡು ವರ್ಷಗಳ ಬಳಿಕ ಅಂತರರಾಷ್ಟ್ರೀಯ ಫುಟ್‌ಬಾಲ್ ಟೂರ್ನಿಯಲ್ಲಿ ಆಡಲಿದ್ದಾರೆ. ಇಲ್ಲಿಯ ಕಳಿಂಗ ಕ್ರೀಡಾಂಗಣದಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಬುಧವಾರ ಬಾಂಗ್ಲಾದೇಶ ಸವಾಲನ್ನು ಆತಿಥೇಯ ತಂಡ ಎದುರಿಸಲಿದೆ.

ತಂಡ ಇಂತಿದೆ: ಗೋಲ್‌ಕೀಪರ್ಸ್: ಸೈಯದ್ ಜಾಹಿದ್ ಹುಸೇನ್ ಬುಖಾರಿ, ಮೋಹಿತ್ ಸಿಂಗ್ ಧಾಮಿ, ಸೋಮ್ ಕುಮಾರ್.‌ ಡಿಫೆಂಡರ್ಸ್: ಅಮನ್‌ದೀಪ್, ಹಲೆನ್ ನೊಂಗ್ಡು, ವಿಕಾಸ್‌ ಯುಮ್ನಮ್, ಸಾಜದ್‌ ಹುಸೇನ್ ಪರಾಯ್‌, ರಾಜ್ ಬಾಸ್ಫೋರ್, ಬ್ರಿಜೇಶ್ ಗಿರಿ, ತಂಕಧರ್ ಬಾಗ್, ಪ್ರೀತಮ್ ಮೀಟೆ ಸೊರೊಖೈಬಮ್. ಮಿಡ್‌ಫೀಲ್ಡರ್ಸ್: ಸಿಬಜಿತ್ ಸಿಂಗ್ ಲೀಮಾಪೋಕ್‌ಪಮ್‌, ವಿಬಿನ್ ಮೋಹನನ್, ವಿನಯ್ ಹರ್ಜಿ, ಮಹೆಸನ್ ಸಿಂಗ್ ಟೋಂಗ್‌ಬ್ರಮ್‌, ಸುಜಿತ್ ಸಿಂಗ್, ಹರ್ಷ್ ಶೈಲೇಶ್ ಪಟ್ರೆ, ಟೈಸನ್ ಸಿಂಗ್ ಲೋಯಿಟಾಂಗ್‌ಬಮ್‌, ಮ್ಯಾಕಾರ್ಟನ್ ಲೂಯಿಸ್ ನಿಕ್ಸನ್. ಫಾರ್ವರ್ಡ್ಸ್: ಗುರುಕೀರತ್‌ ಸಿಂಗ್, ಪಾರ್ತಿಬ್ ಸುಂದರ್ ಗೊಗೊಯ್, ಹಿಮಾಂಶು ಜಾಂಗ್ರಾ, ಶುಭೋ ಪಾಲ್.

ಮುಖ್ಯ ಕೋಚ್: ಷಣ್ಮುಗಂ ವೆಂಕಟೇಶ್.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು