ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಯಾಫ್ ಫುಟ್‌ಬಾಲ್: ಫೈನಲ್‌ಗೆ ಭಾರತ ಮಹಿಳಾ ತಂಡ

Published 6 ಫೆಬ್ರುವರಿ 2024, 18:34 IST
Last Updated 6 ಫೆಬ್ರುವರಿ 2024, 18:34 IST
ಅಕ್ಷರ ಗಾತ್ರ

ಢಾಕಾ (ಪಿಟಿಐ): ಉತ್ತರಾರ್ಧದಲ್ಲಿ ನೇಹಾ ಅವರು ಗಳಿಸಿದ ಎರಡು ಗೋಲುಗಳ ನೆರವಿನಿಂದ ಭಾರತ ತಂಡ, ಸ್ಯಾಫ್‌ 19 ವರ್ಷದೊಳಗಿನವರ ಮಹಿಳಾ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನ ಕೊನೆಯ ಲೀಗ್ ಪಂದ್ಯದಲ್ಲಿ ಮಂಗಳವಾರ ನೇಪಾಳ ತಂಡವನ್ನು 4–0 ಗೋಲುಗಳಿಂದ ಮಣಿಸಿ ಫೈನಲ್ ಪ್ರವೇಶಿಸಿದೆ.   

ಭಾರತ ತಂಡವು ಗುರುವಾರ ನಡೆಯಲಿರುವ ಫೈನಲ್‌ನಲ್ಲಿ ಆತಿಥೇಯ ಮತ್ತು ಹಾಲಿ ಚಾಂಪಿಯನ್ ಬಾಂಗ್ಲಾದೇಶವನ್ನು ಎದುರಿಸಲಿದೆ.

ಭಾರತ ಮೊದಲ ಪಂದ್ಯವನ್ನು ಭೂತಾನ್ ವಿರುದ್ಧ 10-0 ಅಂತರದಿಂದ ಗೆದ್ದಿತ್ತು, ನಂತರ ಬಾಂಗ್ಲಾದೇಶ ವಿರುದ್ಧ 0-1 ಅಂತರದಿಂದ ಪರಾಭವಗೊಂಡಿತ್ತು. 

ಮೊದಲಾರ್ಧದಲ್ಲಿ ಉಭಯ ತಂಡಗಳಿಂದ ಗೋಲು ಬರಲಿಲ್ಲ. ಆದರೆ ವಿರಾಮದ ನಂತರ ಉತ್ತಮ ಪ್ರದರ್ಶನ ನೀಡಿದ ಭಾರತದ ಆಟಗಾರ್ತಿಯರು ನಾಲ್ಕು ಗೋಲುಗಳನ್ನು ಗಳಿಸಿದರು. 

ನೇಹಾ 54 ಮತ್ತು 80ನೇ ನಿಮಿಷದಲ್ಲಿ ಗೋಲು ಗಳಿಸಿದರೆ, ಸುಲಾಂಜನಾ ರಾವುಲ್ (85ನೇ ನಿಮಿಷ) ಮತ್ತು ಸಿಂಡಿ ರೆಮ್ರುತ್‌ಪುಯಿ ಕೊಲ್ನಿ (90+3ನೇ ನಿಮಿಷ) ಗೋಲು ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT