ನವದೆಹಲಿ: 2031ರ ಎಎಫ್ಸಿ ಏಷ್ಯನ್ ಕಪ್ ಟೂರ್ನಿಯ ಆತಿಥ್ಯ ವಹಿಸಲು ಆಸಕ್ತಿ ಪತ್ರ ಸಲ್ಲಿಸಿರುವುದಾಗಿ ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ (ಎಐಎಫ್ಎಫ್) ಶುಕ್ರವಾರ ತಿಳಿಸಿದೆ.

ಈ ಪತ್ರ ಸಲ್ಲಿಸಲು ಮಾರ್ಚ್ 31ರ ಗಡುವು ನೀಡಲಾಗಿದ್ದು, ಆತಿಥ್ಯಕ್ಕೆ ಆಸಕ್ತಿ ತೋರಿದ ಏಳು ರಾಷ್ಟ್ರಗಳ ಫುಟ್ಬಾಲ್ ಫೆಡರೇಷನ್ಗಳ ಪೈಕಿ ಎಐಎಫ್ಎಫ್ ಕೂಡ ಒಂದಾಗಿದೆ. ಬಿಡ್ ಸಲ್ಲಿಸಿರುವುದನ್ನು ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ನ ಉಪ ಮಹಾ ಪ್ರಧಾನ ಕಾರ್ಯದರ್ಶಿ ಎಂ.ಸತ್ಯನಾರಾಯಣ ಖಚಿತಪಡಿಸಿದ್ದಾರೆ.

ಟೂರ್ನಿಯ ಆತಿಥ್ಯಕ್ಕೆ ಭಾರತದ ಜೊತೆಗೆ ಆಸ್ಟ್ರೇಲಿಯಾ, ದಕ್ಷಿಣ ಕೊರಿಯಾ ಮತ್ತು ಯುಎಇ ಕೂಡ ಪೈಪೋಟಿಯಲ್ಲಿವೆ. ಇಂಡೊನೇಷ್ಯಾ ಮತ್ತು ಕುವೈತ್ ದೇಶಗಳೂ ಆಸಕ್ತಿಪತ್ರ ಸಲ್ಲಿಸಿವೆ. ಕಿರ್ಗಿಸ್ತಾನ, ತಾಜಿಕಿಸ್ತಾನ ಮತ್ತು ಉಜ್ಬೇಕಿಸ್ತಾನ ಜಂಟಿಯಾಗಿ ಬಿಡ್ ಸಲ್ಲಿಸಿವೆ.

ಆತಿಥ್ಯ ವಹಿಸುವ ದೇಶ ಯಾವುದೆಂಬುದು 2026ರಲ್ಲಿ ನಿರ್ಧಾರವಾಗಲಿದೆ. ಆ ದೇಶದ ತಂಡ ಟೂರ್ನಿಗೆ ನೇರವಾಗಿ ಪ್ರವೇಶ ಪಡೆಯಲಿದೆ.

1956ರಲ್ಲಿ ಎಎಫ್ಸಿ ಏಷ್ಯನ್ ಕಪ್ ಆರಂಭವಾಗಿತ್ತು. ಭಾರತ 1964ರಲ್ಲಿ ರನ್ನರ್ ಅಪ್ ಆಗಿತ್ತು. 1984, 2011, 2019 ಮತ್ತು 2023ರಲ್ಲಿ ಗುಂಪು ಹಂತದಲ್ಲಿ ಹೊರಬಿದ್ದಿತ್ತು.

ಆಸ್ಟ್ರೇಲಿಯಾ, ಯುಎಇ, ದಕ್ಷಿಣ ಕೊರಿಯಾ ಮತ್ತು ಕುವೈಟ್ ಈ ಹಿಂದೆ ಟೂರ್ನಿಯ ಆತಿಥ್ಯ ವಹಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.