ಸೋಮವಾರ, ಜೂಲೈ 13, 2020
28 °C
41 ವರ್ಷಗಳ ನಂತರ ಮತ್ತೆ ಆತಿಥ್ಯ

ಮಹಿಳಾ ಏಷ್ಯಾಕಪ್‌ ಫುಟ್‌ಬಾಲ್‌ ಆತಿಥ್ಯ ಭಾರತಕ್ಕೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಏಷ್ಯನ್‌ ಫುಟ್‌ಬಾಲ್‌ ಫೆಡರೇಷನ್‌, 2022ರ ಮಹಿಳಾ ಏಷ್ಯಾ ಕಪ್‌ ಆತಿಥ್ಯವನ್ನು ಭಾರತಕ್ಕೆ ವಹಿಸಿದೆ. 1979ರ ನಂತರ ಮೊದಲ ಬಾರಿ ಭಾರತಕ್ಕೆ ಈ ಟೂರ್ನಿಯ ಆತಿಥ್ಯ ಒದಗಿದೆ.

ಎಎಫ್‌ಸಿ ಮಹಿಳಾ ಫುಟ್‌ಬಾಲ್‌ ಸಮಿತಿ ಸಭೆಯ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ. ಆತಿಥ್ಯದ ಹಕ್ಕು ಪಡೆಯುವಂತೆ ಸಮಿತಿಯು, ಕಳೆದ ಫೆಬ್ರುವರಿಯಲ್ಲಿಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ಗೆ (ಎಐಎಫ್‌ಎಫ್‌) ಶಿಫಾರಸು ಮಾಡಿತ್ತು.

ಈ ನಿರ್ಧಾರವನ್ನು ಎಎಫ್‌ಸಿ ಮಹಾ ಕಾರ್ಯದರ್ಶಿ ಡಾಟೊ ವಿಂಡ್ಸರ್‌ ಜಾನ್‌ ಪ್ರಕಟಿಸಿದರು.

1979ರಲ್ಲಿ ಈ ಚಾಂಪಿಯನ್‌ಷಿಪ್‌ ತವರಿನಲ್ಲಿ ನಡೆದಾಗ ಭಾರತ ರನ್ನರ್ಸ್‌ ಅಪ್‌ ಸ್ಥಾನ ಪಡೆದಿತ್ತು. ಮುಂದಿನ ಆವೃತ್ತಿಯ ಟೂರ್ನಿಯಲ್ಲಿ, ಎಂಟು ತಂಡಗಳ ಬದಲು 12 ತಂಡಗಳು ಪಾಲ್ಗೊಳ್ಳಲಿವೆ. ಆತಿಥ್ಯ ವಹಿಸುತ್ತಿರುವ ಕಾರಣ ಭಾರತ ನೇರವಾಗಿ ಟೂರ್ನಿಯಲ್ಲಿ ಆಡುವ ಅರ್ಹತೆ ಗಳಿಸಿದೆ.

ಈ ಚಾಂಪಿಯನ್‌ಷಿಪ್‌ 2023ರ ಫಿಫಾ ಮಹಿಳಾ ವಿಶ್ವಕಪ್‌ಗೆ ಅಂತಿಮ ಅರ್ಹತಾ ಟೂರ್ನಿಯಾಗಿಯೂ ಪರಿಗಣನೆಯಾಗಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು