ಮಂಗಳವಾರ, ಮಾರ್ಚ್ 21, 2023
29 °C

ಫುಟ್‌ಬಾಲ್‌: ಭಾರತ ಮಹಿಳಾ ತಂಡಕ್ಕೆ ಭರ್ಜರಿ ಜಯ

ಪಿಟಿಐ Updated:

ಅಕ್ಷರ ಗಾತ್ರ : | |

ಜರ್ಕಾ, ಜೋರ್ಡನ್: ಶಿಲ್ಜಿ ಶಾಜಿ ಅವರ ಕಾಲ್ಚಳಕದ ನೆರವಿನಿಂದ ಭಾರತ ಜೂನಿಯರ್‌ (17 ವರ್ಷದೊಳಗಿನ) ಮಹಿಳೆಯರ ತಂಡದವರು ಸ್ನೇಹಪರ ಫುಟ್‌ಬಾಲ್‌ ಪಂದ್ಯದಲ್ಲಿ ಜೋರ್ಡನ್‌ ತಂಡವನ್ನು 7–0 ಗೋಲುಗಳಿಂದ ಮಣಿಸಿದರು.

ಶಿಲ್ಜಿ ಅವರು ಭಾನುವಾರ ನಡೆದ ಪಂದ್ಯದ 4, 37, 74 ಮತ್ತು 76ನೇ ನಿಮಿಷದಲ್ಲಿ ಗೋಲು ಗಳಿಸಿದರು. ಇತರ ಗೋಲುಗಳನ್ನು ಮನೀಷಾ ಕುಮಾರಿ (13), ಪೂಜಾ (18) ಹಾಗೂ ಸಂಜನಾ (90+1) ತಂದಿತ್ತರು.

ಉಭಯ ತಂಡಗಳ ನಡುವಿನ ಎರಡನೇ ಪಂದ್ಯ ಗುರುವಾರ ನಡೆಯಲಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು