ಕೌಲಾಲಂಪುರ: ಭಾರತ 23 ವರ್ಷದೊಳಗಿನ ಫುಟ್ಬಾಲ್ ತಂಡವು ಇಲ್ಲಿನ ಯು.ಎಂ. ಅರೇನಾ ಕ್ರೀಡಾಂಗಣದಲ್ಲಿ ನಡೆದ ಸ್ನೇಹಪರ ಪಂದ್ಯದಲ್ಲಿ 1–2ರಿಂದ ಇರಾಕ್ನ 23 ವರ್ಷದೊಳಗಿನ ತಂಡದ ಎದುರು ಪರಾಭವಗೊಂಡಿತು.

ಭಾರತ ತಂಡದ ಪರ ಮೊಹಮ್ಮದ್ ಸನಾನ್ (39ನೇ ನಿಮಿಷ) ಏಕೈಕ ಗೋಲು ಹೊಡೆದರು. ಕುವೈತ್ ತಂಡದ ಧುಲ್ಫಿಕರ್ ಯೂನಸ್ (36ನೇ ನಿಮಿಷ) ಹಾಗೂ ಮುಸ್ತಫಾ ನವಾಫ್ ಝೈ (72ನೇ ನಿಮಿಷ) ತಲಾ ಒಂದು ಗೋಲು ಗಳಿಸಿದರು.

ಪಂದ್ಯದ ವೇಳೆ ಕ್ರೀಡಾಂಗಣದಲ್ಲಿ ಪ್ರೇಕ್ಷಕರಿಗೆ ಪ್ರವೇಶ ನಿಷೇಧಿಸಲಾಗಿತ್ತು. ಉಭಯ ತಂಡಗಳು ಗುರುವಾರ (ಆಗಸ್ಟ್ 28) ನಡೆಯಲಿರುವ ಮತ್ತೊಂದು ಸ್ನೇಹಪರ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.

ಸೆಪ್ಟೆಂಬರ್ನಲ್ಲಿ ದೋಹಾದಲ್ಲಿ ನಡೆಯಲಿರುವ ಎಎಫ್ಸಿ 23 ವರ್ಷದೊಳಗಿನವರ ಏಷ್ಯಾ ಕಪ್ ಫುಟ್ಬಾಲ್ ಟೂರ್ನಿಯ ಸಿದ್ಧತೆಯ ಭಾಗವಾಗಿ ಭಾರತ ತಂಡವು ಈ ಪಂದ್ಯಗಳನ್ನು ಆಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.