ದಿನ ಭವಿಷ್ಯ: ಈ ರಾಶಿಯ ನಿರುದ್ಯೋಗಿಗಳಿಗೆ ಅವಕಾಶಗಳು ಒದಗಿ ಬರಲಿವೆ..
Published 30 ನವೆಂಬರ್ 2025, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಸಮಸ್ಯೆಯ ಗೋಪುರವನ್ನು ಹೊತ್ತಿರುವ ನಿಮಗೆ ಹಂತ ಹಂತವಾಗಿ ಪರಿಹಾರ ದೊರಕಲಿದೆ. ಕ್ರೀಡಾಪಟುಗಳು ತಮ್ಮ ಕ್ರೀಡೆಯಲ್ಲಿ ಉತ್ತಮ ಸಾಧನೆಯಿಂದ ಬಹುಮಾನದ ಜತೆಯಲ್ಲಿ ಗೌರವ ಗಳಿಸುವ ಯೋಗವಿದೆ.
ವೃಷಭ
ಗೊಂದಲಕ್ಕೆ ಬಂಧುಮಿತ್ರರಿಂದ ಸಲಹೆ ಪಡೆದು ಅಳವಡಿಸಿಕೊಳ್ಳುವು ದರಿಂದ ಪ್ರಯೋಜನ ಪಡೆದುಕೊಳ್ಳಲಿದ್ದೀರಿ. ಮುತುವರ್ಜಿವಹಿಸಿ ಮಾಡಿದ ಕೆಲಸ ಸಣ್ಣ ಮಕ್ಕಳಿಂದಾಗಿ ಹಾಳಾಗಬಹುದು.
ಮಿಥುನ
ಮಕ್ಕಳ ವಿಚಾರವಾಗಿ ಇದ್ದ ಸಮಸ್ಯೆಗಳು ಶೀಘ್ರ ಪರಿಹಾರವಾಗುವ ಲಕ್ಷಣಗಳು ತೋರಿಬರುತ್ತವೆ. ತಾತ್ಕಾಲಿಕ ಹುದ್ದೆಯವರಿಗೆ ಕಾಯಂ ಆಗುವ ಸಾಧ್ಯತೆ ಇರುತ್ತದೆ. ಪ್ರಗತಿ ಪ್ರಾಪ್ತಿಯಾಗಲಿದೆ.
ಕರ್ಕಾಟಕ
ಆತ್ಮೀಯರಿಂದ ಭೂಮಿಯ ವಿಷಯದಲ್ಲಿ ಮೋಸ ಹೋಗುವ ಸಾಧ್ಯತೆ. ಮಗಳಿಂದ ಶುಭ ಸುದ್ದಿ ಕೇಳುವಿರಿ. ಔಷಧ ಮಾರಾಟದಿಂದ ಸಂಪಾದನೆ ಹೆಚ್ಚಳ. ಅನುಭವ ಕಥೆಗಳನ್ನು ಹಂಚಿಕೊಳ್ಳಲಿದ್ದೀರಿ.
ಸಿಂಹ
ಇತರರಿಗೆ ಸಮಯ ನೀಡುವುದರಿಂದ ಸ್ವಂತ ಕೆಲಸಗಳು ನಿಧಾನಗತಿಯಲ್ಲಿ ಸಾಗಲಿವೆ. ಮಗಳಿಗೆ ಹೆಸರಿಡುವ ವಿಷಯವಾಗಿ ಚರ್ಚೆ ಆಗುತ್ತದೆ. ಉದ್ಯೋಗದಿಂದ ಒಳ್ಳೆಯ ಅನುಭವ ಸಿಗಲಿದೆ.
ಕನ್ಯಾ
ಅಕ್ಕ ಪಕ್ಕದ ಮನೆಯವರ ಉಪಟಳ ತಡೆಯಲಾಗದೆ ಏರುಧ್ವನಿಯಲ್ಲಿ ಮಾತನಾಡುವಿರಿ. ತಾಳ್ಮೆಯನ್ನು ಕಳೆದುಕೊಳ್ಳಬೇಡಿ. ಕನಸು ಕಾಣುವುದು ಮಾತ್ರವಲ್ಲದೆ ಅದನ್ನು ಸಾಕಾರಗೊಳಿಸಲು ಶ್ರಮವಹಿಸಿ.
ತುಲಾ
ಸ್ವಯಂ ಸಾಮರ್ಥ್ಯದಿಂದ ಅವಕಾಶಗಳನ್ನು ಪಡೆದುಕೊಳ್ಳುವ ಹಾದಿಯನ್ನು ನೋಡಿರಿ. ಸ್ಪರ್ಧಾತ್ಮಕ ಮನೋಭಾವವು ಅತ್ಯುನ್ನತ ಮಟ್ಟಕ್ಕೆ ಏರುವಂತೆ ಮಾಡುತ್ತದೆ. ಕ್ರಿಮಿಕೀಟಗಳಿಂದ ಅಲರ್ಜಿ ಉಂಟಾಗಬಹುದು.
ವೃಶ್ಚಿಕ
ಸವಾಲು ಸಾಮರ್ಥ್ಯದ ಬಗ್ಗೆ ಬಂದಾಗ ಎಂಥ ಕೆಲಸವನ್ನಾದರೂ ಮಾಡಲು ಮುಂದಾಗುತ್ತೀರಿ. ರಾಜಕೀಯ ವ್ಯವಹಾರಗಳ ಪ್ರಬಲ ಆಕಾಂಕ್ಷಿಯಾಗಿರುವ ನೀವು ಇನ್ನಷ್ಟು ಚುರುಕಾಗಬೇಕಾಗಿದೆ.
ಧನು
ಮಾನಸಿಕವಾಗಿ ಕುಗ್ಗದೇ ಧೈರ್ಯದಿಂದ ಇರುವುದು ಮೂಲ ಮಂತ್ರವಾಗಿರಲಿ. ನೂತನ ವಾಹನ ಕೊಳ್ಳುವ ಆಲೋಚನೆ ಬರಲಿದೆ. ಬ್ಯಾಂಕಿನ ಸಾಲಗಳು ತೀರಿ ನೆಮ್ಮದಿ ಮೂಡಲಿದೆ.
ಮಕರ
ಹೊಸ ವೃತ್ತಿಯ ವಿಚಾರವಾಗಿ ಅವಕಾಶಗಳು ಬರಲಿವೆ ಅದನ್ನು ಪ್ರಯೋಜನಾಕಾರಿಯಾಗಿ ಉಪಯೋಗಿಸಿಕೊಳ್ಳಿ. ಅಧಿಕಾರಿಗಳ ಭೇಟಿಯಿಂದ ಕೆಲಸ ಕಾರ್ಯಗಳು ಏರು-ಪೇರಾಗುವುದು.
ಕುಂಭ
ಚಂಚಲ ಮನೋಭಾವದಿಂದಾಗಿ ಕೆಲವು ತೀರ್ಮಾನ ತೆಗೆದುಕೊಳ್ಳುವುದು ಕಷ್ಟಕರ ಎನಿಸುವುದು. ಕಲ್ಲಿನ ಅಥವಾ ಟೈಲ್ಸ್ ಕೆಲಸ ಮಾಡುವವರು ಉದ್ಯೋಗದಲ್ಲಿ ಜಾಗ್ರತೆ ವಹಿಸಿ. ಮನೆಯ ಕೆಲಸದಲ್ಲಿ ನಿರ್ಲಕ್ಷ್ಯ ಬೇಡ.
ಮೀನ
ಪೂರ್ಣ ಪ್ರಮಾಣದಲ್ಲಿ ಶ್ರಮ ಪಟ್ಟರೆ ಎಲ್ಲದರಲ್ಲಿ ಜಯಗಳಿಸಬಹುದು. ನಿರುದ್ಯೋಗಿಗಳಿಗೆ ಅವಕಾಶಗಳು ಒದಗಿ ಬರಲಿವೆ. ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಮೇಲುಗೈ ಸಾಧಿಸುವಿರಿ.