ಶನಿವಾರ, ಮೇ 28, 2022
26 °C

ಫುಟ್‌ಬಾಲ್‌: ಇಂಡಿಯನ್‌ ವಿಮೆನ್ಸ್ ಲೀಗ್‌ ನೇರಪ್ರಸಾರ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಭಾರತದ ಪ್ರಮುಖ ಕ್ಲಬ್‌ ಫುಟ್‌ಬಾಲ್ ಟೂರ್ನಿ ಇಂಡಿಯನ್ಸ್ ವಿಮೆನ್ಸ್ ಲೀಗ್‌ (ಐಡಬ್ಲ್ಯುಎಲ್‌) ಯೂರೊಸ್ಪೋರ್ಟ್‌ ಇಂಡಿಯಾ ನೆಟ್‌ವರ್ಕ್‌ನಲ್ಲಿ ನೇರಪ್ರಸಾರವಾಗಲಿದೆ.

ಐದನೇ ಆವೃತ್ತಿಯ ಲೀಗ್‌ನಲ್ಲಿ 12 ತಂಡಗಳು ಪ್ರಶಸ್ತಿಗಾಗಿ ಸೆಣಸಲಿದ್ದು, ಶುಕ್ರವಾರದಿಂದ (ಏಪ್ರಿಲ್‌ 15) ಮೇ 26ರವರೆಗೆ ಒಡಿಶಾದ ಮೂರು ಕ್ರೀಡಾಂಗಣಗಳಲ್ಲಿ ನಡೆಯಲಿದೆ. ಕಳಿಂಗ, ಕ್ಯಾಪಿಟಲ್‌ ಮತ್ತು ಬೆಟಾಲಿಯನ್‌ ಕ್ರೀಡಾಂಗಣಗಳು ಪಂದ್ಯಗಳಿಗೆ ಆತಿಥ್ಯ ವಹಿಸಲಿವೆ.

ಎರಡು ವರ್ಷಗಳ ನಂತರ ಟೂರ್ನಿ ನಡೆಯುತ್ತಿದೆ. ಒಟ್ಟು 66 ಪಂದ್ಯಗಳು ನಡೆಯಲಿವೆ. 30 ಪಂದ್ಯಗಳು ನೇರಪ್ರಸಾರವಾಗಲಿವೆ. ಲೀಗ್‌ನ ಕೊನೆಯಲ್ಲಿ ಅತಿ ಹೆಚ್ಚು ಪಾಯಿಂಟ್ಸ್ ಗಳಿಸಿದ ತಂಡವು ಚಾಂಪಿಯನ್ ಪಟ್ಟ ಧರಿಸಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು