ಗುರುವಾರ , ಆಗಸ್ಟ್ 11, 2022
23 °C

ಆ್ಯಡಂ ಮಿಂಚು; ಮುಂಬೈ ಸಿಟಿಗೆ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬ್ಯಾಂಬೊಲಿಮ್: ಆ್ಯಡಂ ಲಿ ಫಾಂಡ್ರೆ ಅಮೋಘ ಅಟದ ನೆರವಿನಿಂದ ಮುಂಬೈ ಸಿಟಿ ತಂಡವು ಮಂಗಳವಾರ ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿಯ ಪಂದ್ಯದಲ್ಲಿ ಜಯಿಸಿತು.

ಆ್ಯಡಂ ಬಾರಿಸಿದ ಎರಡು ಗೋಲುಗಳ ಬಲದಿಂದ ಮುಂಬೈ ತಂಡವು 3–0 ಗೋಲುಗಳಿಂದ ಈಸ್ಟ್‌ ಬೆಂಗಾಲ್ ವಿರುದ್ಧ ಜಯಿಸಿತು.

ಆ್ಯಡಂ 20ನೇ ನಿಮಿಷದಲ್ಲಿ ಗೋಲು ಬಾರಿಸಿದರು. 48ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಕಾರ್ನರ್‌ನಲ್ಲಿಯೂ ಆ್ಯಡಂ ಗೋಲು ಹೊಡೆದರು. ಇಂಗ್ಲೆಂಡ್‌ನ 33 ವರ್ಷದ ಆ್ಯಂಡ್ರೆ ಮಿಂಚಿನ ವೇಗದಲ್ಲಿ ಚೆಂಡನ್ನು ಗುರಿ ಮುಟ್ಟಿಸಿದರು. ಇದರಿಂದಾಗಿ ತಂಡವು ಜಯದ ದಾರಿ ಹಿಡಿಯಿತು. 

58ನೇ ನಿಮಿಷದಲ್ಲಿ ಹರ್ನನ್ ಸಂತಾನಾ ಗೋಲು ಬಾರಿಸಿ ಮುಂಬೈ ತಂಡ ಜಯದ ಅವಕಾಶವನ್ನು ಮತ್ತಷ್ಟು ಹೆಚ್ಚಿಸಿದರು. ತಂಡದ ಗೋಲ್‌ಕೀಪರ್ ಅಮರೀಂದರ್ ಸಿಂಗ್ ಅವರ ಚುರುಕಾದ ಆಟವು ಬೆಂಗಾಲ್ ತಂಡಕ್ಕೆ ಸಿಂಹಸ್ವಪ್ನವಾಯಿತು.

ಈಸ್ಟ್ ಬೆಂಗಾಲ್ ತಂಡದ ಗೋಲು ಗಳಿಸುವ ಎಲ್ಲ ಪ್ರಯತ್ನಗಳಿಗೂ ಮುಂಬೈ ರಕ್ಷಣಾಪಡೆಯು ಅಡ್ಡಿಯಾಯಿತು. ಮುಂಬೈಗೆ ಇದು ಎರಡನೇ ಜಯ. ಒಂದು ಪಂದ್ಯವನ್ನು ಸೋತಿದೆ. ಆದರೆ, ಆರು ಪಾಯಿಂಟ್ಸ್‌ನೊಂದಿಗೆ ಅಗ್ರಸ್ಥಾನದಲ್ಲಿದೆ.

ಆದರೆ ಈಸ್ಟ್ ಬೆಂಗಾಲ್ ತಂಡವು ಸತತ ಎರಡನೇ ಪಂದ್ಯದಲ್ಲಿಯೂ ಸೋತು ಕೊನೆಯ ಸ್ಥಾನದಲ್ಲಿದೆ. ಈ ಪಂದ್ಯದಲ್ಲಿ ಲಭಿಸಿದ ಒಂದು ಕಾರ್ನರ್‌ನಲ್ಲಿ ಗೋಲು ಹೊಡೆಯುವ ಪ್ರಯತ್ನ ಕೂದಲೆಳೆ ಅಂತರದಲ್ಲಿ ತಪ್ಪಿತು.  ‌ಮುಂಬೈ ತಂಡಕ್ಕೆ ಐದು ಕಾರ್ನರ್‌ಗಳು ಲಭಿಸಿದ್ದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು