ಶನಿವಾರ, ಏಪ್ರಿಲ್ 4, 2020
19 °C

ಐಎಸ್ಎಲ್: ಒಡಿಶಾ–ಕೇರಳ ಪಂದ್ಯ ಡ್ರಾ

ಪಿಟಿಐ Updated:

ಅಕ್ಷರ ಗಾತ್ರ : | |

ಭುವನೇಶ್ವರ : ರೋಚಕ ಹಣಾಹಣಿಯಲ್ಲಿ ತಲಾ ನಾಲ್ಕು ಗೋಲುಗಳನ್ನು ಗಳಿಸಿದ ಒಡಿಶಾ ಎಫ್‌ಸಿ ಮತ್ತು ಕೇರಳ ಬ್ಲಾಸ್ಟರ್ಸ್ ಎಫ್‌ಸಿ ತಂಡಗಳು ಇಂಡಿಯನ್ ಸೂಪರ್ ಲೀಗ್‌ (ಐಎಸ್‌ಎಲ್) ಫುಟ್‌ಬಾಲ್ ಟೂರ್ನಿಯ ಪಂದ್ಯದಲ್ಲಿ ಡ್ರಾ ಸಾಧಿಸಿ ಲೀಗ್ ವ್ಯವಹಾರ ಮುಗಿಸಿದವು.

ಆತಿಥೇಯರ ಪರವಾಗಿ ಮ್ಯಾನ್ಯುಯೆಲ್ ಒನ್ವು ಹ್ಯಾಟ್ರಿಕ್ (1, 36 ಮತ್ತು 51ನೇ ನಿಮಿಷ) ಗಳಿಸಿ ಮಿಂಚಿದರು. 44ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಅವಕಾಶದಲ್ಲಿ ಪೆರೆಸ್ ಗುಡೆಸ್ ಚೆಂಡನ್ನು ಗುರಿ ಮುಟ್ಟಿಸಿದರು. ಕೇರಳ ಬ್ಲಾಸ್ಟರ್ಸ್‌ಗೆ ಆರನೇ ನಿಮಿಷದಲ್ಲಿ ಒಡಿಶಾ ಆಟಗಾರ ನಾರಾಯಣ್ ’ಉಡುಗೊರೆ’ ನೀಡಿದರು. ಮೆಸ್ಸಿ ಬಿ 28ನೇ ನಿಮಿಷದಲ್ಲಿ ಗೋಲು ಗಳಿಸಿದರು. 82 ಮತ್ತು 90ನೇ ನಿಮಿಷದಲ್ಲಿ ಒಗ್ಬೆಚೆ ಪೆನಾಲ್ಟಿ ಅವಕಾಶವನ್ನು ಗೋಲಾಗಿ ಪರಿವರ್ತಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು