ಭಾನುವಾರ, ಜನವರಿ 19, 2020
28 °C

ಒಡಿಶಾಗೆ ಉತ್ಸಾಹ

ಪಿಟಿಐ Updated:

ಅಕ್ಷರ ಗಾತ್ರ : | |

ಹೈದರಾಬಾದ್‌ : ಮೂರು ಸತತ ಗೆಲುವಿನಿಂದ ಉತ್ಸಾಹದಲ್ಲಿರುವ ಒಡಿಶಾ ತಂಡ ಬುಧವಾರ, ಐಎಸ್‌ಎಲ್‌ ಫುಟ್‌ಬಾಲ್‌ ಟೂರ್ನಿಯ ಪಟ್ಟಿಯಲ್ಲಿ ತಳದಲ್ಲಿರುವ ಹೈದರಾಬಾದ್‌ ವಿರುದ್ಧ ಆಡಲಿದೆ. ಸಹಜವಾಗಿ ಈ ಪಂದ್ಯದಲ್ಲಿ ಅದು ಗೆಲ್ಲುವ ನೆಚ್ಚಿನ ತಂಡದಂತೆ ಕಾಣುತ್ತಿದೆ.

ಹೈದರಾಬಾದ್‌ ಮ್ಯಾನೇಜರ್‌ ಫಿಲ್‌ ಬ್ರೌನ್‌ ಕೂಡ ಇತ್ತೀಚೆಗೆ ಲೀಗ್‌ ಮಧ್ಯದಲ್ಲೇ ತಂಡ ತೊರೆದಿದ್ದಾರೆ. ಮಿಡ್‌ಫೀಲ್ಡರ್‌ ಮಾರ್ಕೊ ಸ್ಟಾಂಕೊವಿಕ್‌ ಅಮಾನತು ಆಗಿರುವುದು ಕೂಡ ಒತ್ತಡ ಇನ್ನಷ್ಟು ಹೆಚ್ಚಿಸಿದೆ. ಹೀಗಾಗಿ ಮಿಡ್‌ ಫೀಲ್ಡ್‌ನಲ್ಲಿ ಆದಿಲ್‌ ಖಾನ್‌ ಮತ್ತು ರೋಹಿತ್‌ ಮೇಲೆ ಹೆಚ್ಚಿನ ಒತ್ತಡವಿದೆ.

ಹೈದರಾಬಾದ್‌ಗೆ ಹೆಚ್ಚು ಸವಾಲಿನ ವಿಷಯವಾಗಿರುವುದು ರಕ್ಷಣಾ ವಿಭಾಗ. ಕಡೆಯ ಐದು ಪಂದ್ಯಗಳಲ್ಲಿ 15 ಗೋಲುಗಳನ್ನು ಎದುರಾಳಿಗಳಿಗೆ ಬಿಟ್ಟುಕೊಟ್ಟಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು