ಬೆಂಗಳೂರು: ಕೀಶಮ್ ಬಿಕಾಶ್ ಸಿಂಗ್ ಅವರ ಹ್ಯಾಟ್ರಿಕ್ ನೆರವಿನಿಂದ ಮಣಿಪುರ ತಂಡವು ಟೈರ್1 ಸಬ್ ಜೂನಿಯರ್ ಬಾಲಕರ ರಾಷ್ಟ್ರೀಯ ಫುಟ್‌ಬಾಲ್ ಲೀಗ್‌ನ ಸೆಮಿಫೈನಲ್‌ನಲ್ಲಿ 4–0 ಗೋಲಿನಿಂದ ಗೋವಾ ತಂಡವನ್ನು ಸೋಲಿಸಿತು.
ಮಣಿಪುರ ತಂಡವು ಭಾನುವಾರ ಮಧ್ಯಾಹ್ನ 3 ಗಂಟೆಗೆ ನಡೆಯುವ ಫೈನಲ್‌ನಲ್ಲಿ ಆತಿಥೇಯ ಕರ್ನಾಟಕ ತಂಡವನ್ನು ಎದುರಿಸಲಿದೆ.