ಬೆಂಗಳೂರು: ಮಾತೃ ಪ್ರತಿಷ್ಠಾನ ಫುಟ್‌ಬಾಲ್ ಕ್ಲಬ್ ತಂಡವು ಸೋಮವಾರ ನಡೆದ ಇಂಡಿಯನ್ ವುಮೆನ್ಸ್ ಲೀಗ್ (ಐಡಬ್ಲ್ಯುಎಲ್) ಟೂರ್ನಿಯ ಪಂದ್ಯದಲ್ಲಿ ಜಯಿಸಿತು.
ಅಶೋಕನಗರದ ಕರ್ನಾಟಕ ಫುಟ್‌ಬಾಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮಾತೃ ಪ್ರತಿಷ್ಠಾನ ತಂಡವು 2–0ಯಿಂದ ಮಿಸಾಕಾ ಫುಟ್‌ಬಾಲ್ ಕ್ಲಬ್ ತಂಡದ ವಿರುದ್ಧ ಗೆದ್ದಿತು.
ಮಾತೃ ಪ್ರತಿಷ್ಠಾನ ತಂಡದ ಪ್ರೀತಿ (28ನೇ ಮತ್ತು 67ನೇ ನಿ) ಎರಡು ಗೋಲು ದಾಖಲಿಸಿದರು.
ರೆಬೆಲ್ ವುಮೆನ್ಸ್ ಫುಟ್‌ಬಾಲ್ ಕ್ಲಬ್ ಮತ್ತು ಯುನೈಟೆಡ್ ಫುಟ್‌ಬಾಲ್ ಕ್ಲಬ್ ಕೊಡಗು ತಂಡದ ನಡುವೆ ನಡೆದ ದಿನದ ಮತ್ತೊಂದು ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತು.
ರೆಬೆಲ್ಸ್ ತಂಡದ ಸೆನೊರಿಟಾ ನೊಂಗ್‌ಫ್ಲು (23ನೇ ಮತ್ತು 63ನೇ ನಿ) ಎರಡು ಗೋಲು ದಾಖಲಿಸಿದರು. ಯುನೈಟೆಡ್ ಎಫ್‌ಸಿ ಪರ ಆಯುಷ್ ಮಾಲ್ವಿ(23ನೇ ನಿ) ಮತ್ತು ದಿವ್ಯಾ ರಾಣಾ (93ನೇ ನಿ) ತಲಾ ಒಂದು ಗೋಲು ಗಳಿಸಿದರು.