ಪ್ಯಾರಿಸ್: ವುವಾನ್ ಬರ್ನಟ್ ಮತ್ತು ನೇಮರ್ ಗಳಿಸಿದ ತಲಾ ಒಂದು ಗೋಲಿನ ನೆರವಿನಿಂದ ಪ್ಯಾರಿಸ್ ಸೇಂಟ್ ಜರ್ಮೈನ್ (ಪಿಎಸ್‌ಜಿ) ತಂಡ ಚಾಂಪಿಯನ್ಸ್ ಲೀಗ್ ಫುಟ್‌ಬಾಲ್ ಪಂದ್ಯದಲ್ಲಿ ಗೆಲುವಿನ ಸಿಹಿ ಸವಿದಿದೆ.

ಗುರುವಾರ ನಡೆದ ಹಣಾಹಣಿಯಲ್ಲಿ ಪಿಎಸ್‌ಜಿ 2–1 ಗೋಲುಗಳಿಂದ ಲಿವರ್‌ಪೂಲ್ ತಂಡವನ್ನು ಪರಾಭವಗೊಳಿಸಿತು.

ಉಭಯ ತಂಡಗಳು ಆರಂಭದಿಂದಲೇ ಪರಿಣಾಮಕಾರಿ ಆಟ ಆಡಿದವು. ಹೀಗಾಗಿ 12 ನಿಮಿಷಗಳ ಆಟ ಗೋಲು ರಹಿತವಾಗಿತ್ತು. 13ನೇ ನಿಮಿಷದಲ್ಲಿ ಪಿಎಸ್‌ಜಿ ಖಾತೆ ತೆರೆಯಿತು. ವುವಾನ್ ಬರ್ನಟ್ ಕಾಲ್ಚಳಕ ತೋರಿದರು.

ನಂತರ ಆಟದ ವೇಗ ಹೆಚ್ಚಿಸಿಕೊಂಡ ಪಿಎಸ್‌ಜಿ ತಂಡ 37ನೇ ನಿಮಿಷದಲ್ಲಿ ಮುನ್ನಡೆ ಹೆಚ್ಚಿಸಿಕೊಂಡಿತು. ಬ್ರೆಜಿಲ್‌ನ ನೇಮರ್ ಚಾಕಚಕ್ಯತೆಯಿಂದ ಚೆಂಡನ್ನು ಗುರಿ ತಲುಪಿಸಿದರು. 45+1ನೇ ನಿಮಿಷದಲ್ಲಿ ಲಿವರ್‌ಪೂಲ್ ತಂಡಕ್ಕೆ ಪೆನಾಲ್ಟಿ ಸಿಕ್ಕಿತು. ಈ ಅವಕಾಶದಲ್ಲಿ ಗೋಲು ಹೊಡೆದ ಜೇಮರ್ ಮಿಲ್ನರ್ ಹಿನ್ನಡೆಯನ್ನು 1–2ಕ್ಕೆ ತಗ್ಗಿಸಿದರು.

ದ್ವಿತೀಯಾರ್ಧದಲ್ಲಿ ಉಭಯ ತಂಡಗಳು ಜಿದ್ದಾಜಿದ್ದಿನ ಪೈಪೋಟಿ ನಡೆಸಿದವು. ಹೀಗಾಗಿ ಯಾರಿಗೂ ಚೆಂಡನ್ನು ಗುರಿ ಮುಟ್ಟಿಸಲು ಆಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.