ಭಾನುವಾರ, ಸೆಪ್ಟೆಂಬರ್ 26, 2021
21 °C

ಮೆಸ್ಸಿ ದಾಖಲೆ: ಅರ್ಜೆಂಟೀನಾ ಜಯಭೇರಿ

ಎಪಿ Updated:

ಅಕ್ಷರ ಗಾತ್ರ : | |

Prajavani

ಕೂಯಾಬ, ಬ್ರೆಜಿಲ್‌: ಅರ್ಜೆಂಟೀನಾದ ಖ್ಯಾತ ಆಟಗಾರ ಲಯೊನೆಲ್ ಮೆಸ್ಸಿ ಅವರು ರಾಷ್ಟ್ರೀಯ ತಂಡದ ಪರ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ದಾಖಲೆ ಬರೆದರು. ಕೋಪಾ ಅಮೆರಿಕ ಟೂರ್ನಿಯಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಅರ್ಜೆಂಟೀನಾ ತಂಡವು 4–1ರಿಂದ ಬೊಲಿವಿಯಾ ಎದುರು ಗೆದ್ದಿತು.

34 ವರ್ಷದ ಮೆಸ್ಸಿ ಅವರಿಗೆ ಇದು ರಾಷ್ಟ್ರೀಯ ತಂಡದ ಪರ 148ನೇ ಪಂದ್ಯವಾಗಿತ್ತು. ಎರಡು ಗೋಲು (33ನೇ ನಿಮಿಷ ಪೆನಾಲ್ಟಿ ಹಾಗೂ 42ನೇ ನಿ.) ದಾಖಲಿಸಿದ ಅವರು ಪಂದ್ಯವನ್ನು ಸ್ಮರಣೀಯವಾಗಿರಿಸಿಕೊಂಡರು. ಸದ್ಯ ಅವರು ಗಳಿಸಿದ ಗೋಲುಗಳ ಸಂಖ್ಯೆ 75ಕ್ಕೆ ತಲುಪಿದೆ.ಅರ್ಜೆಂಟೀನಾ ಪರ ಅತಿ ಹೆಚ್ಚು ಪಂದ್ಯಗಳಲ್ಲಿ ಕಣಕ್ಕಿಳಿದ ಈ ಹಿಂದಿನ ದಾಖಲೆ ಜೇವಿಯರ್ ಮಚಾ ರೆನೊ (147) ಅವರ ಹೆಸರಿನಲ್ಲಿತ್ತು.

ಅರ್ಜೆಂಟೀನಾ ತಂಡವು ಶನಿವಾರ ನಡೆಯುವ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಈಕ್ವೆಡಾರ್ ತಂಡಕ್ಕೆ ಮುಖಾಮುಖಿಯಾಗಲಿದೆ. ಇನ್ನೊಂದು ಪಂದ್ಯದಲ್ಲಿ ಉರುಗ್ವೆ 1–0ಯಿಂದ ಪರಾಗ್ವೆ ತಂಡವನ್ನು ಸೋಲಿಸಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು