ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕತಾರ್‌ನಲ್ಲಿ ನಡೆಯುವ 2022ರ ವಿಶ್ವಕಪ್ ನನ್ನ ಕೊನೇ ಟೂರ್ನಿಯಾಗಲಿದೆ: ಮೆಸ್ಸಿ

Last Updated 7 ಅಕ್ಟೋಬರ್ 2022, 1:34 IST
ಅಕ್ಷರ ಗಾತ್ರ

ಈ ವರ್ಷ ಕತಾರ್‌ನಲ್ಲಿ ನಡೆಯಲಿರುವ ವಿಶ್ವಕಪ್‌ 'ಖಂಡಿತ'ನನ್ನ ವೃತ್ತಿಜೀವನದ ಕೊನೆಯ ಟೂರ್ನಿಯಾಗಲಿದೆ ಎಂದು ಫುಟ್‌ಬಾಲ್‌ ದಿಗ್ಗಜ,ಅರ್ಜೆಂಟೀನಾತಂಡದ ನಾಯಕ ಲಿಯೋನೆಲ್‌ ಮೆಸ್ಸಿ ಗುರುವಾರ ಹೇಳಿದ್ದಾರೆ.

'ಇಎಸ್‌ಪಿಎನ್‌ ಅರ್ಜೆಂಟೀನಾ' ಜೊತೆ ಮಾತನಾಡಿರುವ 35 ವರ್ಷದ ಮೆಸ್ಸಿ, 'ಖಂಡಿತವಾಗಿಯೂ ಇದು ನನ್ನ ಕೊನೇ ವಿಶ್ವಕಪ್‌. ದೈಹಿಕವಾಗಿ ಉತ್ತಮವಾಗಿದ್ದೇನೆ ಎಂಬ ಭಾವನೆಯಿದೆ. ಕಳೆದ ವರ್ಷ ಸಾಧ್ಯವಾಗದಷ್ಟು ಉತ್ತಮ ಪ್ರದರ್ಶನವನ್ನು ಈ ವರ್ಷದ ವಿಶ್ವಕಪ್‌ ಪೂರ್ವ ಋತುವಿನಲ್ಲಿ ನೀಡಲು ಸಾಧ್ಯವಾಗಿದೆ. ಉತ್ತಮ ಮನಸ್ಥಿತಿ ಮತ್ತು ಸಾಕಷ್ಟು ಭರವಸೆಯೊಂದಿಗೆ ಮುನ್ನಡೆಯಲು ಇದು ಅತ್ಯಗತ್ಯವಾಗಿತ್ತು' ಎಂದಿದ್ದಾರೆ.

ಅಂತರರಾಷ್ಟ್ರೀಯ ಫುಟ್‌ಬಾಲ್‌ಗೆ2005ರಲ್ಲಿ ಪದಾರ್ಪಣೆ ಮಾಡಿರುವ ಮೆಸ್ಸಿ ಇದೀಗ ಐದನೇ ವಿಶ್ವಕಪ್‌ ಆಡಲು ಸಜ್ಜಾಗಿದ್ದಾರೆ. ಈ ವರೆಗೆ 164 ಪಂದ್ಯಗಳಲ್ಲಿ ಅರ್ಜೆಂಟೀನಾ ಪರ ಆಡಿರುವ ಮೆಸ್ಸಿ, ತಮ್ಮ ತಂಡದ ಪರ ಅತಿ ಹೆಚ್ಚು (90) ಗೋಲು ಗಳಿಸಿದ ಆಟಗಾರ ಎನಿಸಿದ್ದಾರೆ.

ವಿಶ್ವಕಪ್‌ ಕುರಿತು ಉತ್ಸುಕರಾಗಿರುವುದಾಗಿ ಪ್ಯಾರಿಸ್‌ನಲ್ಲಿ ನಡೆದ ಸಂದರ್ಶನದಲ್ಲಿ ಮೆಸ್ಸಿ ಹೇಳಿಕೊಂಡಿದ್ದಾರೆ.

'ವಿಶ್ವಕಪ್ ಬಗ್ಗೆ ಉತ್ಸುಕತೆ, ಉದ್ವೇಗ ಇದ್ದೇ ಇದೆ. ಪಂದ್ಯಾವಳಿ ಪ್ರಾರಂಭವಾಗುವವರೆಗೆ ಕಾಯಲು ಆಗುತ್ತಿಲ್ಲ' ಎಂದು ಹೇಳಿಕೊಂಡಿದ್ದಾರೆ. ಟೂರ್ನಿಯು ಇದೇ ವರ್ಷದ ನವೆಂಬರ್‌ನಲ್ಲಿ ಆರಂಭಗೊಳ್ಳಲಿದೆ.

2006ರಲ್ಲಿ ಜರ್ಮನಿ, 2010ರಲ್ಲಿ ದಕ್ಷಿಣ ಆಫ್ರಿಕಾ, 2014ರಲ್ಲಿ ಬ್ರೆಜಿಲ್‌ ಮತ್ತು 2018ರಲ್ಲಿ ರಷ್ಯಾದಲ್ಲಿ ನಡೆದ ವಿಶ್ವಕಪ್‌ ಟೂರ್ನಿಗಳಲ್ಲಿ ಮೆಸ್ಸಿ ಆಡಿದ್ದಾರೆ. 2014ರಲ್ಲಿ ಅರ್ಜೆಂಟೀನಾ ರನ್ನರ್ಸ್‌ ಅಪ್‌ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT