ಮಂಗಳವಾರ, ಮೇ 17, 2022
27 °C

ಹುಟ್ಟಿದ ಕಂದಮ್ಮನ ಕಳೆದುಕೊಂಡ ಫುಟ್‌ಬಾಲ್‌ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಮ್ಯಾಂಚೆಸ್ಟರ್‌ (ಬ್ರಿಟನ್‌): ಫುಟ್‌ಬಾಲ್‌ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ ಅವರು ಹುಟ್ಟಿದ ಮಗನನ್ನು ಕಳೆದುಕೊಂಡಿರುವುದಾಗಿ ಸೋಮವಾರ ಪ್ರಕಟಿಸಿದ್ದಾರೆ.

'ಹೆಂಡತಿ ಜಾರ್ಜಿನಾ ರಾಡ್ರಿಗ್ವೆಜ್‌ ಮತ್ತು ನಾನು ಅವಳಿ ಮಕ್ಕಳ ನಿರೀಕ್ಷೆಯಲ್ಲಿದ್ದೇವೆ' ಎಂದು ಕಳೆದ ವರ್ಷ ಅಕ್ಟೋಬರ್‌ನಲ್ಲಿ ರೊನಾಲ್ಡೊ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು.

ಹುಟ್ಟಿದ ಕಂದಮ್ಮನನ್ನು ಕಳೆದುಕೊಂಡಿರುವುದು ಮತ್ತು ಭರವಸೆಯಾಗಿ ಬಂದಿರುವ ಮಗಳ ಬಗ್ಗೆ ಪ್ರಕಟಿಸಿರುವ ಹೇಳಿಕೆಯನ್ನು ಮ್ಯಾಂಚೆಸ್ಟರ್‌ ಯುನೈಟೆಡ್‌ ಫಾರ್ವರ್ಡ್‌ನ ಟ್ವಿಟರ್‌ ಖಾತೆಯೂ ಹಂಚಿಕೊಂಡಿದೆ. 'ಕ್ರಿಸ್ಟಿಯಾನೊ, ನಿಮ್ಮ ನೋವು ನಮ್ಮ ನೋವೂ ಸಹ..' ಎಂದು ಟ್ವೀಟಿಸಿದೆ.

'ನಮ್ಮ ಮಗ ಇನ್ನಿಲ್ಲ ಎಂಬುದನ್ನು ಅತ್ಯಂತ ನೋವಿನಲ್ಲಿಯೂ ತಿಳಿಸಬೇಕಿದೆ. ಇದು ಯಾವುದೇ ಪಾಲಕರಿಗೆ ಅತ್ಯಂತ ನೋವಿನ ಸಂಗತಿಯಾಗಿದೆ. ಹುಟ್ಟಿರುವ ಮಗಳು ಈಗ ನಮ್ಮ ಬದುಕಿಗೆ ಬಲ, ಭರವಸೆ ಮತ್ತು ಸಂತಸ ತಂದಿದ್ದಾಳೆ. ವೈದ್ಯರು, ಶುಶ್ರೂಷಕರು ನೀಡಿದ ಸಹಕಾರ ಮತ್ತು ಕಾಳಜಿಗೆ ಧನ್ಯವಾದಗಳು...' ಎಂದು ರೊನಾಲ್ಡೊ ಮತ್ತು ಅವರ ಪತ್ನಿ ಜಂಟಿ ಹೇಳಿಕೆ ಪ್ರಕಟಿಸಿದ್ದಾರೆ.

ಇದನ್ನೂ ಓದಿ–

ರೊನಾಲ್ಡೊ ಮತ್ತು ರಾಡ್ರಿಗ್ವೆಜ್‌ ದಂಪತಿಗೆ ನಾಲ್ಕು ವರ್ಷದ ಮತ್ತೊಬ್ಬ ಮಗಳಿದ್ದಾಳೆ ಹಾಗೂ ರೊನಾಲ್ಡೊ ಮೊದಲ ಸಂಗಾತಿಗೆ ಮೂವರು ಮಕ್ಕಳಿದ್ದಾರೆ.

ರಿಯಲ್‌ ಮ್ಯಾಡ್ರಿಡ್‌ ಫುಟ್‌ಬಾಲ್‌ ಕ್ಲಬ್‌ ಕೂಡ ಸಂತಾಪ ಸೂಚಿಸಿ ವೆಬ್‌ಪುಟದಲ್ಲಿ ಪ್ರಕಟಿಸಿದೆ.

ಇದನ್ನೂ ಓದಿ–

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು