ನಾನು ಮೇರಿ ಕೋಮ್ ಅಭಿಮಾನಿ: ಸುನಿಲ್ ಚೆಟ್ರಿ

ಭಾನುವಾರ, ಜೂಲೈ 21, 2019
27 °C

ನಾನು ಮೇರಿ ಕೋಮ್ ಅಭಿಮಾನಿ: ಸುನಿಲ್ ಚೆಟ್ರಿ

Published:
Updated:
Prajavani

ಅಹಮದಾಬಾದ್: ‘ನಾನು, ಬಾಕ್ಸರ್ ಮೇರಿ ಕೋಮ್ ಅವರ ಅಭಿಮಾನಿಯಾಗಿದ್ದು ಅವರ ಜೀವನ ಮತ್ತು ಸಾಧನೆ ನನ್ನನ್ನು ಪುಳಕಗೊಳಿಸಿದೆ’ ಎಂದು ಭಾರತ ಫುಟ್‌ಬಾಲ್ ತಂಡದ ನಾಯಕ ಸುನಿಲ್ ಚೆಟ್ರಿ ಹೇಳಿದ್ದಾರೆ.‌

‘ನನ್ನ ಕ್ರೀಡಾ ಜೀವನದ ಮೇಲೆ ಪ್ರಭಾವ ಬೀರಿದ ಅನೇಕ ಮಂದಿ ಇದ್ದಾರೆ. ಮೇರಿ ಕೋಮ್ ಕೂಡ ಅವರಲ್ಲಿ ಒಬ್ಬರು. ಅವಳಿ ಮಕ್ಕಳಿಗೆ ಜನ್ಮ ನೀಡಿದ ನಂತರವೂ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡು ಪ್ರಶಸ್ತಿ ಗೆದ್ದಿರುವುದು ಮಹತ್ವದ ವಿಷಯ. ಮೂವರು ಮಕ್ಕಳ ತಾಯಿಯಾದ ಮೇಲೆಯೂ ಬಾಕ್ಸಿಂಗ್‌ ಕುರಿತ ಅವರ ಹುಮ್ಮಸ್ಸು ಕುಂದಲಿಲ್ಲ. ಇಂಥವರು ದೇಶಕ್ಕೆ ಪ್ರೇರಣೆಯಾಗದಿದ್ದರೆ ಬೇರೆ ಯಾರು ಆಗಲು ಸಾಧ್ಯ’ ಎಂದು ಚೆಟ್ರಿ ಪ್ರಶ್ನಿಸಿರುವುದಾಗಿ ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ (ಎಐಎಫ್ಎಫ್) ಹೇಳಿದೆ.

‘34 ವರ್ಷದ ಚೆಟ್ರಿ ಎಐಎಫ್ಎಫ್ ನೀಡುವ ವರ್ಷದ ಫುಟ್‌ಬಾಲ್ ಆಟಗಾರ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದರು. ಈ ಮೂಲಕ ಆರನೇ ಬಾರಿ ಈ ಪ್ರಶಸ್ತಿ ಗೆದ್ದ ಆಟಗಾರ ಎಂಬ ದಾಖಲೆ ತಮ್ಮದಾಗಿಸಿಕೊಂಡಿದ್ದರು. 2007, 2011, 2013, 2014 ಮತ್ತು 2017ರಲ್ಲೂ ಅವರು ಪ್ರಶಸ್ತಿ ಗಳಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !