ಗುರುವಾರ , ನವೆಂಬರ್ 14, 2019
18 °C
ಯೂರೋಪಿಯನ್‌ ಲೀಗ್‌ನಲ್ಲಿ ಅತಿ ಹೆಚ್ಚು ಗೋಲು

ಚಿನ್ನದ ಬೂಟು ಮೆಸ್ಸಿ ಪಾಲು

Published:
Updated:
Prajavani

ಬಾರ್ಸಿಲೋನಾ: ಯೂರೋಪಿಯನ್‌ ಫುಟ್‌ಬಾಲ್‌ ಲೀಗ್‌ಗಳಲ್ಲಿ ಅತಿ ಹೆಚ್ಚು ಗೋಲು ಗಳಿಸಿದ ಲಯೊನೆಲ್‌ ಮೆಸ್ಸಿ ಅವರು ಚಿನ್ನದ ಬೂಟು ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಬಾರ್ಸಿಲೋನಾ ಆಟಗಾರನಿಗೆ ಒಲಿದ ಆರನೇ ಚಿನ್ನದ ಬೂಟು ಇದು.

ಸಮೀಪದ ಪ್ರತಿಸ್ಪರ್ಧಿ ಪ್ಯಾರಿಸ್‌ ಸೈಂಟ್‌ ಜರ್ಮನ್‌ ತಂಡದ ಕೈಲಿಯನ್‌ ಬಾಪೆ ಅವರನ್ನು ಮೆಸ್ಸಿ ಹಿಂದಿಕ್ಕಿದ್ದಾರೆ. ಈ ವರ್ಷ ಬಾಪೆ 33 ಗೋಲು ಹೊಡೆದರೆ ಮೆಸ್ಸಿ ಬಾರಿಸಿದ ಗೋಲುಗಳ ಸಂಖ್ಯೆ 36. ಸತತ ಮೂರನೇ ವರ್ಷ ಅವರು ಈ ಗೌರವಕ್ಕೆ ಭಾಜನರಾಗಿದ್ದಾರೆ.

 

ಪ್ರತಿಕ್ರಿಯಿಸಿ (+)