ಬುಧವಾರ, ಜೂನ್ 23, 2021
25 °C

ಐಎಸ್‌ಎಲ್‌: 2025ರವರೆಗೆ ಮುಂಬೈ ತಂಡದಲ್ಲಿ ವಿಘ್ನೇಶ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಬೆಂಗಳೂರಿನ ವಿಘ್ನೇಶ್ ದಕ್ಷಿಣಾಮೂರ್ತಿ ಅವರೊಂದಿಗೆ ಮಾಡಿಕೊಂಡಿರುವ ಒಪ್ಪಂದವನ್ನು ಮುಂಬೈ ಸಿಟಿ ಎಫ್‌ಸಿ 2025ರವರೆಗೆ ವಿಸ್ತರಿಸಿದೆ.

ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯಲ್ಲಿ ಮುಂಬೈ ತಂಡವು ಈ ಬಾರಿ ಟ್ರೋಫಿ ಗೆಲ್ಲುವಲ್ಲಿ ವಿಘ್ನೇಶ್ ಪ್ರಮುಖ ಪಾತ್ರ ವಹಿಸಿದ್ದರು. ತಂಡವು ಮೊದಲ ಬಾರಿ ಪ್ರಶಸ್ತಿ ಜಯಿಸಿತ್ತು.

‘ಮುಂಬೈ ಸಿಟಿ ಎಫ್‌ಸಿಯೊಂದಿಗೆ ಮೂರು ವರ್ಷಗಳಿಂದ ಇದ್ದೇನೆ. ಮುಂದಿನ ಕೆಲವು ವರ್ಷಗಳಿಗೆ ನನ್ನ ಒಪ್ಪಂದ ವಿಸ್ತರಣೆಯಾಗಿದ್ದು, ತಂಡವು ನನ್ನ ಮೇಲಿಟ್ಟಿರುವ ನಂಬಿಕೆಯಿಂದ ವಿಶೇಷ ಭಾವ ಮೂಡಿದೆ‘ ಎಂದು 23 ವರ್ಷದ ವಿಘ್ನೇಶ್ ಹೇಳಿದ್ದಾರೆ.

‘ವಿಘ್ನೇಶ್‌ ಯುವ ಮತ್ತು ಪರಿಶ್ರಮಿ ಹುಡುಗ. ತನ್ನ ಆಟದಲ್ಲಿ ಪ್ರತಿದಿನ ಸುಧಾರಣೆ ತಂದುಕೊಳ್ಳಲು ಬಯಸುತ್ತಾನೆ‘ ಎಂದು ತಂಡದ ಮುಖ್ಯ ಕೋಚ್‌ ಸೆರ್ಜಿಯೊ ಲೋಬೆರಾ ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು