ಶನಿವಾರ, ಮೇ 15, 2021
25 °C

ನಿಕೋಲಸ್‌ಗೆ ಎಂಟು ವರ್ಷ ನಿಷೇಧ

ರಾಯಿಟರ್ಸ್‌/ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಲಾಸನ್‌ : ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವುದು ಸಾಬೀತಾಗಿರುವ ಕಾರಣ ಕ್ರೀಡಾ ಆಡಳಿತಗಾರ, ತೈ ನಿಕೋಲಸ್‌ ಮೇಲೆ ಫಿಫಾ ಎಂಟು ವರ್ಷ ನಿಷೇಧ ಹೇರಿದೆ.

ನಿಕೋಲಸ್‌ ಅವರು ಈ ಹಿಂದೆ ಒಸೀನಿಯಾ ಫುಟ್‌ಬಾಲ್‌ ಕಾನ್ಫೆಡರೇಷನ್‌ನ (ಒಎಫ್‌ಸಿ) ಮಹಾಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದರು. ಫಿಫಾ ಸ್ಟ್ಯಾಂಡಿಂಗ್‌ ಸಮಿತಿಯ ಸದಸ್ಯರೂ ಆಗಿದ್ದರು.

‘2014ರಿಂದ 2017ರ ಅವಧಿಯಲ್ಲಿ ಫಿಫಾ, ಒಎಫ್‌ಸಿಗೆ ಬಿಡುಗಡೆ ಮಾಡಿದ್ದ ಅನುದಾನವನ್ನು ನಿಕೋಲಸ್‌ ದುರು ಪಯೋಗಪಡಿಸಿಕೊಂಡಿದ್ದಾರೆ. ಈ ಮೂಲಕ ಫಿಫಾ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಹೀಗಾಗಿ ಅವರ ಮೇಲೆ ಎಂಟು ವರ್ಷ ನಿಷೇಧ ಹೇರಲಾಗಿದೆ. ಈ ಅವಧಿಯಲ್ಲಿ ಯಾವುದೇ ಫುಟ್‌ಬಾಲ್‌ ಚಟುವಟಿಕೆಗಳಲ್ಲಿ ಭಾಗವಹಿಸುವಂತಿಲ್ಲ. ಅವರು ₹34.62 ಲಕ್ಷ ದಂಡವನ್ನೂ ಕಟ್ಟಬೇಕು’ ಎಂದು ಫಿಫಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು