ಶನಿವಾರ, ಮೇ 30, 2020
27 °C

ದ.ಕೊರಿಯಾದಲ್ಲಿ ಫುಟ್‌ಬಾಲ್‌ ಆರಂಭ: ಮಾತಿಲ್ಲ..ಹಸ್ತಲಾಘವ, ಸಂಭ್ರಮಾಚರಣೆಯೂ ಇಲ್ಲ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಸೋಲ್‌: ಕೊರೊನಾ ಉಪಟಳದ ಹಿನ್ನೆಲೆಯಲ್ಲಿ ದಕ್ಷಿಣ ಕೊರಿಯಾದಲ್ಲಿ ಎರಡು ತಿಂಗಳು ಸ್ಥಗಿತಗೊಂಡಿದ್ದ ಕ್ರೀಡಾ ಚಟುವಟಿಕೆಗಳ ಕಲರವ ಮತ್ತೆ ಆರಂಭವಾಗಿದೆ. ಶುಕ್ರವಾರದಿಂದ ಪ್ರೇಕ್ಷಕರಿಲ್ಲದೆ ಫುಟ್‌ಬಾಲ್‌ ಶುರುವಾಗಲಿದ್ದು, ಸೋಂಕು ಹರಡದಂತೆ ತಡೆಯಲು, ಗೋಲು ಗಳಿಸಿದಾಗ ಸಂಭ್ರಮ, ಹಸ್ತಲಾಘವ, ಆಟಗಾರರ ಮಧ್ಯೆ ಮಾತು ಕೂಡ ನಡೆಯುಂತಿಲ್ಲ.

ವೈರಾಣುವಿನ ಹಾವಳಿ ಧಿಕ್ಕರಿಸಿ ಬೆಲಾರಸ್‌, ತುರ್ಕಮೆನಿಸ್ತಾನ್ ಹಾಗೂ ತೈವಾನ್‌ ಫುಟ್‌ಬಾಲ್‌ ಆರಂಭಿಸಿದ ಬಳಿಕ, ಈಗ 2002ರ ವಿಶ್ವಕಪ್‌ನ ಸಹ ಆತಿಥ್ಯ ವಹಿಸಿದ್ದ ಹಾಗೂ ಸೆಮಿಫೈನಲ್‌ ಕೂಡ ತಲುಪಿದ್ದ ದಕ್ಷಿಣ ಕೊರಿಯಾ, ಪಂದ್ಯಗಳಿಗೆ ಅವಕಾಶ ನೀಡಿದೆ.

ಮಂಗಳವಾರ, ಪ್ರೇಕ್ಷಕರಿಲ್ಲದೆ ಬೇಸ್‌ಬಾಲ್ ಪಂದ್ಯಗಳನ್ನು ಆರಂಭಿಸಲಾಗಿತ್ತು.

ಏಷ್ಯಾದ ಈ ಋತುವಿನ ಮೊದಲ ಪ್ರಮುಖ ಟೂರ್ನಿಯಾದ ಕೆ–ಲೀಗ್‌ ಮೂಲಕ ಫುಟ್‌ಬಾಲ್‌ ಪಂದ್ಯಗಳು ಆರಂಭವಾಗಲಿದ್ದು, ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಜಿಯೊನ್ಬಕ್‌ ಮೋಟರ್ಸ್ ಹಾಗೂ ಸುವೊನ್‌ ಬ್ಲ್ಯೂವಿಂಗ್ಸ್ ಪೈಪೋಟಿ ನಡಸಲಿವೆ.

ಕ್ರೀಡಾಂಗಣದಲ್ಲಿ ಆಟಗಾರರಿಗೆ ಕಟ್ಟುನಿಟ್ಟಿನ ಆರೋಗ್ಯ ತಪಾಸಣೆ ಹಾಗೂ ನೈರ್ಮಲ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಪಂದ್ಯಕ್ಕಿಂತ ಮೊದಲು ಆಟಗಾರರು ಹಾಗೂ ಕೋಚ್‌ಗಳ ದೇಹದ ಉಷ್ಣಾಂಶ ಕೂಡ ಪರೀಕ್ಷಿಸುವ ವ್ಯವಸ್ಥೆಯಿದ್ದು, ಸೋಂಕು ಕಂಡುಬಂದರೆ, ಆ ಇಡೀ ತಂಡ ಹಾಗೂ ಆ ತಂಡ ಆಡಬೇಕಿದ್ದ ಎದುರಾಳಿ ತಂಡಕ್ಕೂ ಎರಡು ವಾರಗಳ ಕಾಲ ವಿರಾಮ ನೀಡಲಾಗುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು