ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಕೊರಿಯಾದಲ್ಲಿ ಫುಟ್‌ಬಾಲ್‌ ಜ್ವರ: ಹಸ್ತಲಾಘವ, ಸಂಭ್ರಮಾಚರಣೆ ಇಲ್ಲ...

Last Updated 6 ಮೇ 2020, 11:45 IST
ಅಕ್ಷರ ಗಾತ್ರ

ಸೋಲ್‌: ಕೊರೊನಾ ಉಪಟಳದ ಹಿನ್ನೆಲೆಯಲ್ಲಿ ದಕ್ಷಿಣ ಕೊರಿಯಾದಲ್ಲಿ ಎರಡು ತಿಂಗಳು ಸ್ಥಗಿತಗೊಂಡಿದ್ದ ಕ್ರೀಡಾ ಚಟುವಟಿಕೆಗಳ ಕಲರವ ಮತ್ತೆ ಆರಂಭವಾಗಿದೆ. ಶುಕ್ರವಾರದಿಂದ ಪ್ರೇಕ್ಷಕರಿಲ್ಲದೆ ಫುಟ್‌ಬಾಲ್‌ ಶುರುವಾಗಲಿದ್ದು, ಸೋಂಕು ಹರಡದಂತೆ ತಡೆಯಲು ಗೋಲು ಗಳಿಸಿದಾಗ ಸಂಭ್ರಮ, ಹಸ್ತಲಾಘವ, ಆಟಗಾರರ ಮಧ್ಯೆ ಮಾತು ಕೂಡ ನಡೆಯುಂತಿಲ್ಲ.

ವೈರಾಣುವಿನ ಹಾವಳಿ ಧಿಕ್ಕರಿಸಿ ಬೆಲಾರಸ್‌, ತುರ್ಕಮೆನಿಸ್ತಾನ್ ಹಾಗೂ ತೈವಾನ್‌ ಫುಟ್‌ಬಾಲ್‌ ಆರಂಭಿಸಿದ ಬಳಿಕ, ಈಗ 2002ರ ವಿಶ್ವಕಪ್‌ನ ಸಹ ಆತಿಥ್ಯ ವಹಿಸಿದ್ದ ಹಾಗೂ ಸೆಮಿಫೈನಲ್‌ ಕೂಡ ತಲುಪಿದ್ದ ದಕ್ಷಿಣ ಕೊರಿಯಾ, ಪಂದ್ಯಗಳಿಗೆ ಅವಕಾಶ ನೀಡಿದೆ.

ಮಂಗಳವಾರ, ಪ್ರೇಕ್ಷಕರಿಲ್ಲದೆ ಬೇಸ್‌ಬಾಲ್ ಪಂದ್ಯಗಳನ್ನು ಆರಂಭಿಸಲಾಗಿತ್ತು.

ಏಷ್ಯಾದ ಈ ಋತುವಿನ ಮೊದಲ ಪ್ರಮುಖ ಟೂರ್ನಿಯಾದ ಕೆ–ಲೀಗ್‌ ಮೂಲಕ ಫುಟ್‌ಬಾಲ್‌ ಪಂದ್ಯಗಳು ಆರಂಭವಾಗಲಿದ್ದು, ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಜಿಯೊನ್ಬಕ್‌ ಮೋಟರ್ಸ್ ಹಾಗೂ ಸುವೊನ್‌ ಬ್ಲ್ಯೂವಿಂಗ್ಸ್ ಪೈಪೋಟಿ ನಡಸಲಿವೆ.

ಕ್ರೀಡಾಂಗಣದಲ್ಲಿ ಆಟಗಾರರಿಗೆ ಕಟ್ಟುನಿಟ್ಟಿನ ಆರೋಗ್ಯ ತಪಾಸಣೆ ಹಾಗೂ ನೈರ್ಮಲ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಪಂದ್ಯಕ್ಕಿಂತ ಮೊದಲು ಆಟಗಾರರು ಹಾಗೂ ಕೋಚ್‌ಗಳ ದೇಹದ ಉಷ್ಣಾಂಶ ಕೂಡ ಪರೀಕ್ಷಿಸುವ ವ್ಯವಸ್ಥೆಯಿದ್ದು, ಸೋಂಕು ಕಂಡುಬಂದರೆ, ಆ ಇಡೀ ತಂಡ ಹಾಗೂ ಆ ತಂಡ ಆಡಬೇಕಿದ್ದ ಎದುರಾಳಿ ತಂಡಕ್ಕೂ ಎರಡು ವಾರಗಳ ಕಾಲ ವಿರಾಮ ನೀಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT