ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್‌ ಟೂರ್ನಿ: ಒಡಿಶಾ– ನಾರ್ತ್ಈಸ್ಟ್ ಮುಖಾಮುಖಿ

Last Updated 17 ಜನವರಿ 2022, 13:59 IST
ಅಕ್ಷರ ಗಾತ್ರ

ಮಡಗಾಂವ್‌: ಕೋಚ್‌ ಕಿಕೊ ರೆಮಿರೆಜ್‌ ಅವರನ್ನು ಕೈಬಿಟ್ಟಿರುವ ಒಡಿಶಾ ಎಫ್‌ಸಿ ತಂಡವು, ಲಯ ಕಂಡುಕೊಳ್ಳುವ ನಿರೀಕ್ಷೆಯಲ್ಲಿದ್ದು ಇಂಡಿಯನ್ ಸೂಪರ್ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯಲ್ಲಿ ಮಂಗಳವಾರ ನಾರ್ತ್‌ಈಸ್ಟ್ ಯುನೈಟೆಡ್‌ ಎಫ್‌ಸಿ ಸವಾಲು ಎದುರಿಸಲಿದೆ.

ಕಳೆದ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್‌ ಎದುರು ನಿರಾಸೆ ಅನುಭವಿಸಿದ ಬಳಿಕ ಒಡಿಶಾ ತಂಡವು ರೆಮಿರೆಜ್‌ ಅವರೊಂದಿಗಿನ ಒಪ್ಪಂದವನ್ನು ಕೊನೆಗೊಳಿಸಿತ್ತು. ಸದ್ಯ ತಂಡವು 10 ಪಂದ್ಯಗಳಿಂದ 13 ಪಾಯಿಂಟ್ಸ್ ಕಲೆಹಾಕಿದೆ.

ಕಿಕೊ ಬದಲಿಗೆ ಕಿನೊ ಗಾರ್ಸಿಯಾ ಅವರು ಒಡಿಶಾ ತಂಡದ ಹಂಗಾಮಿ ಕೋಚ್ ಆಗಿದ್ದು, ನಾರ್ತ್‌ ಈಸ್ಟ್ ಎದುರಿನ ಪಂದ್ಯದಲ್ಲಿ ತಂಡವನ್ನು ಜಯದ ದಡ ತಲುಪಿಸುವ ಹೊಣೆ ಹೊತ್ತಿದ್ದಾರೆ. ನಾರ್ತ್‌ಈಸ್ಟ್ ತಂಡವು 11 ಪಂದ್ಯಗಳಿಂದ ಒಂಬತ್ತು ಪಾಯಿಂಟ್ಸ್ ಗಳಿಸಿದ್ದು ಜಯಕ್ಕೆ ಕಾತರಿಸುತ್ತಿದೆ.

ಈ ಹಿಂದೆ ಒಡಿಶಾ ತಂಡದಲ್ಲಿ ಆಡಿದ್ದ ಮಾರ್ಸೆಲಿನೊ ಪೆರೇರಾ ಸದ್ಯ ನಾರ್ತ್ಈಸ್ಟ್ ತಂಡದ ಪ್ರಮುಖ ಶಕ್ತಿಯಾಗಿದ್ದಾರೆ. ಐಎಸ್‌ಎಲ್‌ ಟೂರ್ನಿಯಲ್ಲಿ 33 ಗೋಲು ಗಳಿಸಿರುವ ಅವರು 18 ಬಾರಿ ‘ಅಸಿಸ್ಟ್’ ಮಾಡಿದ್ದಾರೆ.

ಪಂದ್ಯ ಆರಂಭ: ರಾತ್ರಿ 7.30

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ ನೆಟ್‌ವರ್ಕ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT