ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೀಡಾಂಗಣದಲ್ಲಿ ಫುಟ್‌ಬಾಲ್ ಆಟಗಾರರಿಗಿಲ್ಲ ಐಸ್ ಬಾತ್!

Last Updated 13 ಜೂನ್ 2021, 21:09 IST
ಅಕ್ಷರ ಗಾತ್ರ

ದೋಹಾ (ಪಿಟಿಐ): ಇಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಮತ್ತು 2023ರ ಏಷ್ಯನ್ ಕಪ್ ಕ್ವಾಲಿಫೈಯಿಂಗ್ ಟೂರ್ನಿಯಲ್ಲಿ ಆಡುತ್ತಿರುವ ಭಾರತದ ಫುಟ್‌ಬಾಲ್ ಆಟಗಾರರಿಗೆ ಕ್ರೀಡಾಂಗಣದಲ್ಲಿ ಪಂದ್ಯಗಳು ಮತ್ತು ತರಬೇತಿ ನಂತರ ಐಸ್‌ ಬಾತ್‌ ಮಾಡಲು ಅವಕಾಶ ನೀಡುತ್ತಿಲ್ಲ.

ಕೋವಿಡ್ ಪ್ರಸರಣ ತಡೆಗೆ ಕಟ್ಟುನಿಟ್ಟಿನ ಕ್ರಮಗಳನ್ನು ಇಲ್ಲಿ ಜಾರಿಗೊಳಿಸಲಾಗಿದೆ. ಅದರಲ್ಲಿರುವ ನಿಯಮದ ಪ್ರಕಾರ ಕ್ರೀಡಾಂಗಣದಲ್ಲಿ ಶೀತಲ ಸ್ನಾನ (ಐಸ್‌ ಬಾತ್) ವ್ಯವಸ್ಥೆಯನ್ನು ತೆಗೆದುಹಾಕಲಾಗಿದೆ. ಆದ್ದರಿಂದಾಗಿ ಕ್ರೀಡಾಂಗಣದಲ್ಲಿ ಪಂದ್ಯ ಅಥವಾ ತಾಲೀಮಿನ ನಂತರ ಭಾರತದ ಆಟಗಾರರು ತಮ್ಮ ಹೋಟೆಲ್‌ಗಳಿಗ ಮರಳಿ ಐಸ್ ಬಾತ್ ಮಾಡಬೇಕಿದೆ.

‘ಆಟಗಾರರು ಉಳಿದಿಕೊಂಡಿರುವ ಹೋಟೆಲ್‌ಗಳ ಕೋಣೆಗಳಲ್ಲಿಯೇ ಪ್ರತಿಯೊಬ್ಬರಿಗೂ ಐಸ್‌ ಬಾತ್ ವ್ಯವಸ್ಥೆ ಕಲ್ಪಿಸಲಾಗಿದೆ. ಸೋಂಕು ಪ್ರಸರಣದ ಅಪಾಯವನ್ನು ತಪ್ಪಿಸಲು ಈ ವ್ಯವಸ್ಥೆ ಮಾಡಲಾಗಿದೆ‘ ಎಂದು ತಂಡದ ವೈದ್ಯ ಶೆರ್ವಿನ್ ಶರೀಫ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT