ಮಂಗಳವಾರ, ಜೂನ್ 28, 2022
21 °C

ಪಿಎಸ್‌ಜಿ ಆಟಗಾರ್ತಿ ಮೇಲೆ ಹಲ್ಲೆ: ಬಂಧನ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ವೆರ್ಸಾಯ್ಲಿಸ್‌: ಪ್ಯಾರಿಸ್ ಸೇಂಟ್ ಜರ್ಮನ್ ಕ್ಲಬ್‌ನ ಮಹಿಳಾ ತಂಡದ ಸದಸ್ಯೆ ಖೈರಾ ಹಮ್ರೊಯ್ ಮೇಲೆ ರಸ್ತೆಯಲ್ಲಿ ಹಲ್ಲೆ ನಡೆಸಿದ ಶಂಕೆಯ ಮೇಲೆ ವ್ಯಕ್ತಿಯೊಬ್ಬನನ್ನು ಫ್ರೆಂಚ್ ಪೊಲೀಸರು ಬುಧವಾರ ಬಂಧಿಸಿದ್ದಾರೆ. 

ಫ್ರಾನ್ಸ್ ರಾಜಧಾನಿಯಲ್ಲಿ ಕಳೆದ ವರ್ಷ ನಡೆದ ಘಟನೆಯಲ್ಲಿ ಹಮ್ರೊಯಿ ಅವರನ್ನು ಕಾರಿನಿಂದ ಹೊರಗೆಳೆದು ಕಬ್ಬಿಣದ ಸಲಾಕೆಯಿಂದ ಕಾಲಿಗೆ ಬಡಿಯಲಾಗಿತ್ತು. ಬಂಧಿತ ವ್ಯಕ್ತಿಯು ಹಮ್ರೊಯಿ ಅವರ ಜೊತೆಗೆ ತಂಡದಲ್ಲಿ ಆಡುತ್ತಿದ್ದ ಅಮಿನತ ಡಯಾಲೊ ಅವರ ಗೆಳೆಯ ಎಂದು ಮೂಲಗಳು ತಿಳಿಸಿವೆ. 

ನವೆಂಬರ್‌ 4ರಂದು ರಾತ್ರಿ ಕ್ಲಬ್ ಒಂದರಲ್ಲಿ ನಡೆದ ಡಿನ್ನರ್ ಮುಗಿಸಿ ವಾಪಸಾಗುತ್ತಿದ್ದ ವೇಳೆ ಆಕ್ರಮಣ ನಡೆದಿತ್ತು. ಆಗ ಡಯಾಲೊ ಅವರೇ ಕಾಲು ಚಲಾಯಿಸುತ್ತಿದ್ದರು. ಕ್ರೀಡೆಯಲ್ಲಿ ಉಂಟಾಗಿರುವ ವೈಷಮ್ಯವೇ ಹಲ್ಲೆಗೆ ಕಾರಣವಾಗಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ. ಇಬ್ಬರೂ ಫ್ರಾನ್ಸ್ ರಾಷ್ಟ್ರೀಯ ತಂಡದಲ್ಲಿ ಆಡುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು