ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಸ್‌ಜಿ ಪರ ಲಯೊನೆಲ್‌ ಮೆಸ್ಸಿ ಕೊನೆಯ ಪಂದ್ಯ ನಾಳೆ

Published 1 ಜೂನ್ 2023, 20:50 IST
Last Updated 1 ಜೂನ್ 2023, 20:50 IST
ಅಕ್ಷರ ಗಾತ್ರ

ಪ್ಯಾರಿಸ್‌: ಅರ್ಜೆಂಟೀನಾದ ಫುಟ್‌ಬಾಲ್‌ ಆಟಗಾರ ಲಯೊನೆಲ್‌ ಮೆಸ್ಸಿ ಅವರು ಪ್ಯಾರಿಸ್‌ ಸೇಂಟ್‌ ಜರ್ಮನ್ (ಪಿಎಸ್‌ಜಿ) ಕ್ಲಬ್‌ ಪರ ಶನಿವಾರ ತಮ್ಮ ಕೊನೆಯ ಪಂದ್ಯ ಆಡಲಿದ್ದಾರೆ.

ಪಿಎಚ್‌ಜಿ ತಂಡದ ಕೋಚ್‌ ಕ್ರಿಸ್ಟೋಫ್‌ ಗಾಲ್ಟಿಯೆ ಅವರು ಗುರುವಾರ ಈ ವಿಷಯ ತಿಳಿಸಿದ್ದಾರೆ. ಮೆಸ್ಸಿ ಅವರು ಪಿಎಸ್‌ಜಿ ಕ್ಲಬ್‌ ತೊರೆಯುವುದು ಇದರೊಂದಿಗೆ ಖಚಿತವಾಗಿದೆ. ಮುಂದಿನ ಋತುವಿನಲ್ಲಿ ಅವರು ಸೌದಿ ಅರೇಬಿಯಾದ ಅಲ್‌ ಹಿಲಾಲ್‌ ಕ್ಲಬ್‌ ಪರ ಆಡಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು.

‘ಫುಟ್‌ಬಾಲ್‌ ಇತಿಹಾಸದಲ್ಲೇ ಅತ್ಯಂತ ಶ್ರೇಷ್ಠ ಆಟಗಾರನಿಗೆ ತರಬೇತಿ ನೀಡುವ ಅವಕಾಶ ನನಗೆ ಲಭಿಸಿತ್ತು. ಪಾರ್ಕ್‌ ಡೆ ಪಾಸ್‌ನಲ್ಲಿ ಮೆಸ್ಸಿ ಶನಿವಾರ ಪಿಎಸ್‌ಜಿ ಪರ ಕೊನೆಯ ಪಂದ್ಯ ಆಡಲಿದ್ದಾರೆ’ ಎಂದು ಗಾಲ್ಟಿಯೆ ಸುದ್ದಿಗಾರರಿಗೆ ತಿಳಿಸಿದರು.

ಮೆಸ್ಸಿ 2021 ರಲ್ಲಿ ಪಿಎಸ್‌ಜಿ ಜತೆ ಎರಡು ವರ್ಷಗಳ ಅವಧಿಗೆ ಒಪ್ಪಂದ ಮಾಡಿಕೊಂಡಿದ್ದರು. ಈ ಋತುವಿನಲ್ಲಿ ಅವರು ತಂಡದ ಪರ ಒಟ್ಟು 20 ಗೋಲುಗಳನ್ನು ಗಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT