ಮಿಲಾನ್: ಕ್ರಿಸ್ಟಿಯಾನೊ ರೊನಾಲ್ಡೊ ಮತ್ತು ಫೆಡೆರಿಕೊ ಬರ್ನಾರ್ಡೆಚಿ ಅವರ ಮಿಂಚಿನ ಆಟದ ಬಲದಿಂದ ವುವೆಂಟಸ್ ತಂಡ ಸೀರಿ–ಎ ಫುಟ್‌ಬಾಲ್ ಟೂರ್ನಿಯ ಪಂದ್ಯದಲ್ಲಿ ಗೆದ್ದಿದೆ.

ಸ್ಟೇಡಿಯೊ ಬೆನಿಟೊ ಸ್ಟಿರ್ಪ್ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಹೋರಾಟದಲ್ಲಿ ವುವೆಂಟಸ್ 2–0 ಗೋಲುಗಳಿಂದ ಫ್ರೊಸಿನೋನ್ ತಂಡವನ್ನು ಪರಾಭವಗೊಳಿಸಿತು.

ಉಭಯ ತಂಡಗಳು ಪಂದ್ಯದ ಆರಂಭದಿಂದಲೇ ಜಿದ್ದಾಜಿದ್ದಿನ ಪೈಪೋಟಿ ನಡೆಸಿದವು. ಹೀಗಾಗಿ ಮೊದಲಾರ್ಧ ಗೋಲು ರಹಿತವಾಗಿತ್ತು. ದ್ವಿತೀಯಾರ್ಧದ ಶುರುವಿನಲ್ಲೂ ತುರುಸಿನ ಪೈಪೋಟಿ ಕಂಡುಬಂತು. 81ನೇ ನಿಮಿಷದಲ್ಲಿ ವುವೆಂಟಸ್ ಖಾತೆ ತೆರೆಯಿತು. ರೊನಾಲ್ಡೊ ಗೋಲು ಗಳಿಸಿ ಕ್ರೀಡಾಂಗಣದಲ್ಲಿ ಮೆಕ್ಸಿಕನ್ ಅಲೆ ಏಳುವಂತೆ ಮಾಡಿದರು.

ಪೋರ್ಚುಗಲ್‌ನ ಆಟಗಾರ ರೊನಾಲ್ಡೊ ಹೋದ ವಾರ ನಡೆದಿದ್ದ ಸಸೌಲೊ ಎದುರಿನ ಪಂದ್ಯದಲ್ಲಿ ಎರಡು ಗೋಲು ಬಾರಿಸಿ ಮಿಂಚಿದ್ದರು.

ನಂತರದ ಅವಧಿಯಲ್ಲಿ ವುವೆಂಟಸ್ ಪ್ರಾಬಲ್ಯ ಮೆರೆಯಿತು. ರಕ್ಷಣಾ ವಿಭಾಗದಲ್ಲಿ ಈ ತಂಡ ಗುಣಮಟ್ಟದ ಸಾಮರ್ಥ್ಯ ತೋರಿತು. ಹೆಚ್ಚುವರಿ ಅವಧಿಯಲ್ಲಿ ಫೆಡೆರಿಕೊ ಮೋಡಿ ಮಾಡಿದರು. 90+4ನೇ ನಿಮಿಷದಲ್ಲಿ ಅವರು ಚೆಂಡನ್ನು ಗುರಿ ಮುಟ್ಟಿಸಿದರು.

ವುವೆಂಟಸ್ ತಂಡ ಈ ಬಾರಿಯ ಟೂರ್ನಿಯಲ್ಲಿ ಐದು ಪಂದ್ಯಗಳನ್ನು ಆಡಿದ್ದು 15 ಪಾಯಿಂಟ್ಸ್ ಸಂಗ್ರಹಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.