ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳ ಬ್ಲಾಸ್ಟರ್ಸ್ ತಂಡದ ಷೇರು ಮಾರಿದ ಸಚಿನ್ ತೆಂಡೂಲ್ಕರ್

Last Updated 16 ಸೆಪ್ಟೆಂಬರ್ 2018, 10:30 IST
ಅಕ್ಷರ ಗಾತ್ರ

ಕೊಚ್ಚಿ: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ತಮ್ಮ ಐಎಸ್ಎಲ್ ಫ್ರಾಂಚೈಸ್‌ ಕೇರಳ ಬ್ಲಾಸ್ಟರ್ಸ್ ತಂಡದ ಷೇರುಗಳನ್ನು ಮಾರಿದ್ದಾರೆ.ಹಾಗಾಗಿ ಇನ್ನು ಮುಂದೆ ಸಚಿನ್ ಕೇರಳ ಬ್ಲಾಸ್ಟರ್ಸ್ ತಂಡದ ಮಾಲೀಕರಾಗಿರುವುದಿಲ್ಲ.

ಸಚಿನ್ ತೆಂಡೂಲ್ಕರ್ ಕೇರಳ ಬ್ಲಾಸ್ಟರ್ಸ್ ತಂಡವನ್ನು ಮಾರಿರುವುದು ಕೇರಳದ ಫುಟ್ಬಾಲ್ ಪ್ರೇಮಿಗಳಿಗೆ ಬೇಸರವನ್ನುಂಟು ಮಾಡಿದೆ. ಸಚಿನ್ ಮಾರಿರುವ ಷೇರುಗಳನ್ನು ಎಂ.ಎ. ಯೂಸಫ್ ಅಲಿ ಅವರ ಲುಲು ಗ್ರೂಪ್ ಖರೀದಿಸುವ ಸಾಧ್ಯತೆ ಇದೆ ಎಂದು ಬಲ್ಲಮೂಲಗಳಿಂದ ತಿಳಿದು ಬಂದಿರುವುದಾಗಿ ಮಾತೃಭೂಮಿ ಪತ್ರಿಕೆ ವರದಿ ಮಾಡಿದೆ. ಆದಾಗ್ಯೂ, ಈ ಬಗ್ಗೆ ಲುಲು ಗ್ರೂಪ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಕೇರಳ ಬ್ಲಾಸ್ಟರ್ಸ್ ತಂಡವನ್ನು ಮಾರುವ ನಿರ್ಧಾರವನ್ನು ಸಚಿನ್ ಕೈಗೊಂಡಿದ್ದಾರೆ ಎಂದು ಗೋಲ್ ಡಾಟ್ ಕಾಮ್ ವರದಿ ಮಾಡಿದೆ.2014ರಲ್ಲಿ ಐಎಸ್ಎಲ್ ಆರಂಭಿಸಿದಂದಿನಿಂದ ಇಂದಿನವರೆಗೆ ಸಚಿನ್ ತೆಂಡೂಲ್ಕರ್ ಕೇರಳ ಬ್ಲಾಸ್ಟರ್ಸ್ ತಂಡದಲ್ಲಿ ಪಾಲು ಹೊಂದಿದ್ದರು.

ಹೈದರಾಬಾದ್‍ನ ಮೀಡಿಯಾ ಆ್ಯಂಡ್ ಎಂಟರ್‌ಟೇನ್‍ಮೆಂಟ್ ಹೌಸ್ ಪ್ರಸಾದ್ ಗ್ರೂಪ್‍ಗೆ ಬ್ಲಾಸ್ಟರ್ ತಂಡದ ಶೇ.80 ಪಾಲುದಾರಿಕೆ ಇದೆ. ಬಾಕಿ ಷೇ.20ರಷ್ಟು ಪಾಲು ಸಚಿನ್ ಹೊಂದಿದ್ದರು. ಈ ಷೇರನ್ನು ಸಚಿನ್ ಮಾರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT