ಶುಕ್ರವಾರ, ಆಗಸ್ಟ್ 6, 2021
24 °C

ಸ್ಪಾನಿಷ್ ಫುಟ್‌ಬಾಲ್ ಲೀಗ್‌ಗಳ ವೀಕ್ಷಕರ ಸಂಖ್ಯೆಯಲ್ಲಿ ಶೇ 48ರಷ್ಟು ಏರಿಕೆ

ಎಪಿ Updated:

ಅಕ್ಷರ ಗಾತ್ರ : | |

ಲಾ ಲಿಗಾ ಟೂರ್ನಿಯಲ್ಲಿ ಸಸುನಾ ಮತ್ತು ಅಟ್ಲೆಟಿಕೊ ಮ್ಯಾಡ್ರಿಡ್ ನಡುವಣ ಪಂದ್ಯ –ರಾಯಿಟರ್ಸ್‌ ಚಿತ್ರ

ಮ್ಯಾಡ್ರಿಡ್: ಹೋದ ವಾರ ಆರಂಭವಾದ ಸ್ಪಾನಿಷ್ ಫುಟ್‌ಬಾಲ್ ಟೂರ್ನಿಗಳ ಟೆಲಿವಿಷನ್ ವೀಕ್ಷಕರ ಸಂಖ್ಯೆಯು ಅಂತರರಾಷ್ಟ್ರೀಯ ಮಟ್ಟದಲ್ಲಿ ಶೇ 48ರಷ್ಟು ಏರಿಕೆಯಾಗಿದೆ.

ಕೊರೊನಾ ವೈರಸ್‌ ಸೋಂಕು ತಡೆಗಾಗಿ ಲಾಕ್‌ಡೌನ್ ವಿಧಿಸುವ ಮುನ್ನ ಕೇವಲ 27 ಸುತ್ತುಗಳ ಪಂದ್ಯಗಳು ನಡೆದಿದ್ದರು. ಮೂರು ತಿಂಗಳ ಲಾಕ್‌ಡೌನ್ ನಂತರ ಹೋದ ವಾರ ಟೂರ್ನಿಗಳನ್ನು ಹೋದ ವಾರ ಆರಂಭಿಸಲಾಗಿದೆ.

ಆಫ್ರಿಕಾದಲ್ಲಿ ಶೇ 70, ಯುರೋಪ್‌ನಲ್ಲಿ ಶೇ 56ರಷ್ಟು  ಜನರು ಈ ಪಂದ್ಯಗಳನ್ನು ವೀಕ್ಷಿಸಿದ್ದಾರೆ. ಭಾರತದಲ್ಲಿ ಫೇಸ್‌ಬುಕ್‌ನಲ್ಲಿ ಲೀಗ್ ಪಂದ್ಯಗಳನ್ನು ಪ್ರಸಾರ ಮಾಡಲಾಗಿತ್ತು. ಅದರಲ್ಲಿ ಶೇ 72ರಷ್ಟು ವೀಕ್ಷಕರ ಸಂಖ್ಯೆ ಹೆಚ್ಚಳವಾಗಿದೆ.

‘ಈ ಅಂಕಿ ಸಂಖ್ಯೆಗಳು ಬಹಳ ಉತ್ತೇಜನಕಾರಿಯಾಗಿವೆ. ಲಾ ಲಿಗಾ ಟೂರ್ನಿಯ ವೀಕ್ಷಕರ ಸಂಖ್ಯೆಯು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿರುವುದು ಸಂತಸ ತಂದಿದೆ’ ಎಂದು ಲೀಗ್ ಮಾರುಕಟ್ಟೆ ವಿಭಾಗದ ನಿರ್ದೇಶಕ ಆಸ್ಕರ್ ಮೇಯೊ ಹೇಳಿದ್ದಾರೆ.

‘ವಿಶ್ವದೆಲ್ಲೆಡೆ ಇರುವ ಫುಟ್‌ಬಾಲ್ ಅಭಿಮಾನಿಗಳು ಲೀಗ್‌ ಪಂದ್ಯಗಳನ್ನು ನೋಡಿ ಆನಂದಿಸುತ್ತಿದ್ದಾರೆ. ಇನ್ನೂ ಹೆಚ್ಚು ದಿನ ವೀಕ್ಷಣೆಗೆ ತವಕದಿಂದ ಕಾಯುತ್ತಿದ್ದಾರೆ. ಒಂದು ವಾರದಲ್ಲಿ ಶೇ 50ರ ಸಮೀಪಕ್ಕೆ ಅಂತರರಾಷ್ಟ್ರೀಯ ವೀಕ್ಷಕರ ಏರಿಕೆಯಾಗಿದೆ. ಇದೊಂದು ವಿಶೇಷ. ಇದರ ಶ್ರೇಯ ಅಧಿಕೃತ ಪ್ರಸಾರ ಸಂಸ್ಥೆಗಳಿಗೆ ಸಲ್ಲಬೇಕು. ಅವರ ಪರಿಶ್ರಮದಿಂದಲೇ ಇದು ಸಾಧ್ಯವಾಗುತ್ತಿದೆ. ಅಷ್ಟೇ ಅಲ್ಲ. ಫುಟ್‌ಬಾಲ್ ಕ್ಲಬ್‌ಗಳು ಮತ್ತು ಲೀಗ್‌ನ ಸ್ಪರ್ಧಾತ್ಮಕ ಅಂಶಗಳು ಕೂಡ ಕಾರಣವಾಗಿವೆ. ಸ್ಪೇನ್‌ನಲ್ಲಿಯೂ ಶೇ 12ರಷ್ಟು ಏರಿಕೆಯಾಗಿದೆ’ ಎಂದು ಹೇಳಿದ್ದಾರೆ.

‘ಕ್ರೀಡೆಗಳ ನೇರಪ್ರಸಾರ ನೀಡುವ ಮನರಂಜನೆಯು ಅಸಾಧಾರಣವಾದದ್ದು. ಈ ಸಂದರ್ಭದಲ್ಲಿಯೂ ನಾವು ಕಣಕ್ಕೆ ಮರಳಿರುವುದು ಸಾರ್ಥಕವೆನಿಸುತ್ತಿದೆ. ಜನರಿಗೆ ಮನರಂಜನೆ ನೀಡಲು ಇದೊಂದು  ಉತ್ತಮ ಅವಕಾಶವಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚುವ ಭರವಸೆ’ ಎಂದಿದ್ದಾರೆ.

‘ಲಾ ಲಿಗಾ ವೀಕ್ಷಿಸುತ್ತಿರುವ ಅಭಿಮಾನಿಗಳಿಗೆ ನಾವು ಆಭಾರಿಯಾಗಿದ್ದೇವೆ. ಅವರ ಮನರಂಜನೆಗಾಗಿ ನಮ್ಮ ತಂಡವು ಬಹಳಷ್ಟು ಶ್ರಮಪಟ್ಟು ಕಾರ್ಯನಿರ್ವಹಿಸುತ್ತಿದೆ’ ಎಂದಿದ್ದಾರೆ.

ಜೂನ್ 11ರಂದು ಲೀಗ್ ಪುನರಾರಂಭವಾಗಿತ್ತು. ಶುಕ್ರವಾರ ಮುಕ್ತಾಯವಾಗಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು