ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Video: ಪತ್ನಿ ಗರ್ಭಿಣಿಯಾದ ಖುಷಿಯನ್ನು ಸುನಿಲ್ ಚಟ್ರಿ ವ್ಯಕ್ತಪಡಿಸಿದ್ದು ಹೀಗೆ..

ಇಂಟರ್‌ಕಾಂಟಿನೆಂಟಲ್‌ ಕಪ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಭಾರತ ತಂಡದ ನಾಯಕ ಸಂತಸ ವ್ಯಕ್ತಪಡಿಸಿದರು
Published 13 ಜೂನ್ 2023, 6:59 IST
Last Updated 13 ಜೂನ್ 2023, 6:59 IST
ಅಕ್ಷರ ಗಾತ್ರ

ಭುವನೇಶ್ವರ: ಇಲ್ಲಿನ ಕಳಿಂಗಾ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಇಂಟರ್‌ಕಾಂಟಿನೆಂಟಲ್‌ ಕಪ್‌ ಫುಟ್‌ಬಾಲ್‌ ಟೂರ್ನಿಯ ಪಂದ್ಯದಲ್ಲಿ ಭಾರತ 1–0 ಗೋಲಿನಿಂದ ವನುವಾಟು ದೇಶದ ತಂಡವನ್ನು ಮಣಿಸಿತು.

ಈ ವೇಳೆ ಭಾರತ ತಂಡದ ನಾಯಕ ಸುನಿಲ್‌ ಚೆಟ್ರಿ ಗಳಿಸಿದ ಗೋಲಿನ ನೆರವಿನಿಂದ ಭಾರತ, ಇಂಟರ್‌ಕಾಂಟಿನೆಂಟಲ್‌ ಕಪ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಸತತ 2ನೇ ಗೆಲುವು ಸಾಧಿಸಿತು.

ಈ ವೇಳೆ ಸುನಿಲ್ ಚಟ್ರಿ ಅವರು ಆಚರಿಸಿದ ಸಂಭ್ರಮ ವಿಶಿಷ್ಠವಾಗಿ ಕಂಡಿತು. ಇದೀಗ ಅದು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.

ಇದಕ್ಕೆ ಕಾರಣ ಸುನಿಲ್ ಚಟ್ರಿ ಅವರ ಪತ್ನಿ ಸೋನಮ್ ಅವರು ಗರ್ಭಿಣಿಯಾಗಿರುವುದು. ಚಟ್ರಿ 81 ನೇ ನಿಮಿಷದಲ್ಲಿ ಗೋಲು ದಾಖಲಿಸಿ ಜಯ ತಂದಿತ್ತರು. ಇದೇ ವೇಳೆ ಅವರು ಜರ್ಸಿ ಒಳಗಡೆ ಹೊಟ್ಟೆಯ ಮುಂದೆ ಫುಟ್‌ಬಾಲ್‌ ಅನ್ನು ಇಟ್ಟುಕೊಂಡು ತಾನು ತಂದೆಯಾಗುತ್ತಿರುವ ವಿಷಯವನ್ನು ಸೂಚ್ಯವಾಗಿ ತೋರಿಸಿ ಸಂಭ್ರಮಾಚರಿಸಿದರು.

ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಪತ್ನಿ ಸೋನಮ್‌ ಅವರು ಚಪ್ಪಾಳೆ ತಟ್ಟುತ್ತಾ ನಗು ಬೀರಿದ ದೃಶ್ಯ ಕ್ರೀಡಾಂಗಣದ ಬೃಹತ್‌ ಪರದೆಯಲ್ಲಿ ಮೂಡಿಬಂತು

ನಿನ್ನೆಯ ಪಂದ್ಯದ ಮೂಲ ಅಂತರಾಷ್ಟ್ರೀಯ ಫುಟ್‌ಬಾಲ್ ಪಂದ್ಯದಲ್ಲಿ ಸುನಿಲ್ ಚಟ್ರಿ 86 ಗೋಲು ಗಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT