ಬೆಂಗಳೂರು: ಆರ್.ವಿಶಾಲ್ ತಂದಿತ್ತ ಎರಡು ಗೋಲುಗಳ ನೆರವಿನಿಂದ ರೂಟ್ಸ್ ಎಫ್‌ಸಿ ತಂಡ, ಬಿಡಿಎಫ್‌ಎ ಆಶ್ರಯದ ಸೂಪರ್ ಡಿವಿಷನ್ ಫುಟ್‌ಬಾಲ್ ಲೀಗ್ ಚಾಂಪಿಯನ್‌ಷಿಪ್‌ನಲ್ಲಿ ಜಯ ಸಾಧಿಸಿತು.
ಭಾನುವಾರ ನಡೆದ ಪಂದ್ಯದಲ್ಲಿ ರೂಟ್ಸ್ ಎಫ್‌ಸಿ 4–0 ಗೋಲುಗಳಿಂದ ರೆಬೆಲ್ಸ್ ಎಫ್‌ಸಿ ತಂಡವನ್ನು ಮಣಿಸಿತು.
ವಿಶಾಲ್ ಅವರು 41 ಮತ್ತು 53ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿದರು. ಇತರ ಗೋಲುಗಳನ್ನು ಗೌತಮ್ ರಾಜೇಶ್ (49ನೇ ನಿ.) ಮತ್ತು ಬಿ.ಪಿ.ಅಂಕಿತ್ (70ನೇ ನಿ.) ತಂದಿತ್ತರು.
ಬಿಎಫ್‌ಸಿ ಮತ್ತು ಸೌತ್ ಯುನೈಟೆಡ್ ಎಫ್‌ಸಿ ನಡುವಣ ಪಂದ್ಯ 2–2 ಗೋಲುಗಳ ಡ್ರಾದಲ್ಲಿ ಕೊನೆಗೊಂಡಿತು.
ಬಿಎಫ್‌ಸಿ ಪರ ಸಿ.ಕೆ.ರಶೀದ್ (21ನೇ ನಿ.) ಮತ್ತು ಸತೇಂದರ್ ಸಿಂಗ್ ಯಾದವ್ (90+4) ಹಾಗೂ ಸೌತ್ ಯುನೈಟೆಡ್ ಪರ ಸೂರಜ್ (30) ಮತ್ತು ಮೊಹಮ್ಮದ್ ಅಫ್ತಾಭ್ ಹುಸೇನ್ (72) ಗೋಲು ಗಳಿಸಿದರು.
ಸೋಮವಾರ ನಡೆಯುವ ಪಂದ್ಯಗಳಲ್ಲಿ ಸ್ಟೂಡೆಂಟ್ಸ್ ಯೂನಿಯನ್ ಎಫ್‌ಸಿ– ಎಎಸ್‌ಸಿ ಸೆಂಟರ್ (ಮಧ್ಯಾಹ್ನ 1.30) ಹಾಗೂ ಬೆಂಗಳೂರು ಡ್ರೀಮ್ ಯುನೈಟೆಡ್ ಎಫ್‌ಸಿ– ಎಚ್‌ಎಎಫ್ ಎಫ್‌ಸಿ (ಮಧ್ಯಾಹ್ನ 3.30) ತಂಡಗಳು ಹಣಾಹಣಿ ನಡೆಸಲಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.