ಮಂಗಳವಾರ, ಮಾರ್ಚ್ 28, 2023
31 °C

‘ಫುಟ್‌ಸಾಲ್’ ಫುಟ್‌ಬಾಲ್: ಮಿಂಚಿದ ದಿನೇಶ್‌, ಅಭಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರೆಬೆಲ್ಸ್ ಎಫ್‌ಸಿಯ ದಿನೇಶ್ ಮತ್ತು ಎಮೆಂಟ್ ಎಫ್‌ಸಿಯ ಅಭಿ ನಗರದಲ್ಲಿ ಭಾನುವಾರ ಆರಂಭಗೊಂಡ ರಾಜ್ಯ ಫುಟ್‌ಬಾಲ್ ಸಂಸ್ಥೆ ಆಶ್ರಯದ ‘ಫುಟ್‌ಸಾಲ್’ ಫುಟ್‌ಬಾಲ್ ಟೂರ್ನಿಯಲ್ಲಿ ಮಿಂಚಿದರು. ದಿನೇಶ್ ಗಳಿಸಿದ ಅಮೋಘ ಐದು ಗೋಲುಗಳ ನೆರವಿನಿಂದ ರೆಬೆಲ್ಸ್‌ 8–5 ಗೋಲುಗಳಿಂದ ಬೆಳಗಾಂ ಯುನೈಟೆಡ್‌ ತಂಡವನ್ನು ಮಣಿಸಿತು.

ಮುಹಮ್ಮದ್ (2) ಮತ್ತು ಶಿಹ್ವಾವ್ (1) ಅವರು ರೆಬೆಲ್ಸ್‌ಗಾಗಿ ಇತರ ಮೂರು ಗೋಲುಗಳನ್ನು ಗಳಿಸಿದರು. ಬೆಳಗಾಂ ಯುನೈಟೆಡ್ ಪರವಾಗಿ ನಜೀಬ್‌ (2), ಅಭಿಷೇಕ್‌ (2) ಮತ್ತು ಕೌಸ್ತುಭ್ (1) ಗೋಲು ಗಳಿಸಿದರು. 

ಎಮೆಂಟ್ ಎಫ್‌ಸಿ 9–3ರಲ್ಲಿ ಫ್ರಾನ್ಸಿಸ್ ಕ್ಸೇವಿಯರ್ ಎಫ್‌ಸಿ ವಿರುದ್ಧ ಗೆಲುವು ಸಾಧಿಸಿತು. ಎಮೆಂಟ್ ಪರ ಅಭಿ ನಾಲ್ಕು ಗೋಲು ಗಳಿಸಿದರು. ಜೀಶನ್‌ ಮತ್ತು ಶಬ್ಬಿ ತಲಾ ಎರಡು ಗೋಲು ಗಳಿಸಿದರೆ ರಾಕೇಶ್‌ ಅವರ ಉಡುಗೊರೆ ಗೋಲಿನಿಂದ ಎಮೆಂಟ್ ತಂಡದ ಜಯದ ಅಂತರ ಹೆಚ್ಚಿತು. ಫ್ರಾನ್ಸಿಸ್ ಕ್ಸೇವಿಯರ್ ಎಫ್‌ಸಿಗಾಗಿ ಭುವನ್‌, ದೀಪಕ್ ಮತ್ತು ರಾಕೇಶ್ ಗೋಲು ಗಳಿಸಿದರು.

ಬೀಟಾ ಸ್ಪೋರ್ಟ್ಸ್‌ ಕ್ಲಬ್‌ ವಿರುದ್ಧ ಸೂಪರ್ ಸ್ಟ್ರೈಕರ್ಸ್‌ 12–1ರಲ್ಲಿ ಜಯ ಗಳಿಸಿತು. ಸೂಪರ್ ಸ್ಟ್ರೈಕರ್ಸ್‌ಗಾಗಿ ಅರವಿಂದ ಮತ್ತು ವಿನಯ್ ತಲಾ ಮೂರು ಗೋಲು ಗಳಿಸಿದರೆ ಉದಯ ಮತ್ತು ಶರತ್ ತಲಾ ಎರಡು ಗೋಲು ಗಳಿಸಿದರು. ಯುಗಿತ್‌ ಮತ್ತು ನಿಖಿಲ್ ತಲಾ ಒಂದು ಗೋಲು ಗಳಿಸಿದರು. ಬೀಟಾ ಕ್ಲಬ್‌ನ ಏಕೈಕ ಗೋಲು ವಾಲ್ಟರ್ ಅವರಿಂದ ಮೂಡಿಬಂತು.

ಥಾಂಕೋಸ್ ಸ್ಟೂಡೆಂಟ್ ಯೂನಿಯನ್ ತಂಡ ಇಂಡಿಯನ್ ಫುಟ್‌ಬಾಲ್ ಫ್ಯಾಕ್ಟರಿ ವಿರುದ್ಧ 4–1 ಗೋಲುಗಳಿಂದ ಜಯ ಸಾಧಿಸಿತು. ಗಾಡ್ವಿನ್ (2), ನಂದ (1) ಮತ್ತು ವಿಘ್ನೇಶ್ (1) ಅವರು ಥಾಂಕೋಸ್‌ಗಾಗಿ ಗೋಲು ಗಳಿಸಿದರೆ ಇಂಡಿಯನ್ ಫುಟ್‌ಬಾಲ್ ಫ್ಯಾಕ್ಟರಿ ತಂಡಕ್ಕಾಗಿ ಸ್ಟೀಫನ್ ಚೆಂಡನ್ನು ಗುರಿ ಮುಟ್ಟಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು