ಫ್ಯಾನ್‌ ಫೆಸ್ಟ್‌: ದಾಖಲೆಯ ವೀಕ್ಷಣೆ

7

ಫ್ಯಾನ್‌ ಫೆಸ್ಟ್‌: ದಾಖಲೆಯ ವೀಕ್ಷಣೆ

Published:
Updated:

ಮಾಸ್ಕೊ: ರಷ್ಯಾದ ಪ್ರಮುಖ 11 ನಗರಗಳಲ್ಲಿ ವಿಶ್ವಕಪ್‌ ಪಂದ್ಯಗಳನ್ನು ವೀಕ್ಷಿಸಲು ಆಯೋಜಿಸಿರುವ ‘ಫ್ಯಾನ್‌ ಫೆಸ್ಟ್‌’ಗಳಿಗೆ ಜನ ಮುಗಿಬೀಳುತ್ತಿದ್ದಾರೆ. ಈಗಾಗಲೇ ಮುಕ್ತಾಯಗೊಂಡಿರುವ ಎರಡು ಹಂತದ (ಲೀಗ್‌, ಪ್ರೀ ಕ್ವಾರ್ಟರ್‌ಫೈನಲ್‌) ಪಂದ್ಯಗಳನ್ನು 50 ಲಕ್ಷ ಜನರು ಫ್ಯಾನ್‌ ಫೆಸ್ಟ್‌ನಲ್ಲಿ ವೀಕ್ಷಿಸಿದ್ದಾರೆ ಎಂದು ಫಿಫಾ ವಿಶ್ವಕಪ್‌ ವೆಬ್‌ಸೈಟ್‌ನಲ್ಲಿ ತಿಳಿಸಲಾಗಿದೆ. 

‘ಇನ್ನೂ ಕ್ವಾರ್ಟರ್‌ಫೈನಲ್‌, ಸೆಮಿಫೈನಲ್‌, ಮೂರನೇ ಸ್ಥಾನಕ್ಕಾಗಿ ನಡೆಯುವ ಹಣಾಹಣಿ ಹಾಗೂ ಫೈನಲ್‌ ಪಂದ್ಯಗಳು ಬಾಕಿ ಇವೆ. ಆದರೆ, ಈಗಲೇ 50 ಲಕ್ಷ ಜನರು ಫ್ಯಾನ್‌ ಫೆಸ್ಟ್‌ಗಳಲ್ಲಿ ಪಾಲ್ಗೊಂಡಿ ದ್ದಾರೆ. ಇದೊಂದು ದಾಖಲೆ. 2014ರಲ್ಲಿ ಬ್ರೆಜಿಲ್‌ನಲ್ಲಿ ನಡೆದಿದ್ದ ವಿಶ್ವಕಪ್‌ನ ಫ್ಯಾನ್‌ಫೆಸ್ಟ್‌ಗಳಲ್ಲಿ 29 ಲಕ್ಷ ಜನರು ಪಂದ್ಯಗಳನ್ನು ವೀಕ್ಷಿಸಿದ್ದರು’ ಎಂದು ಫಿಫಾ ಹೇಳಿದೆ. 

ಟಿಕೆಟ್‌ ಸಿಗದೇ ಅಥವಾ ಕ್ರೀಡಾಂಗ ಣಕ್ಕೆ ತೆರಳಿ ಪಂದ್ಯಗಳನ್ನು ವೀಕ್ಷಿಸಲು ಸಾಧ್ಯವಾಗದವರಿಗೆ ವಿಶ್ವಕಪ್‌ ಟೂರ್ನಿಯ ಆತಿಥ್ಯ ವಹಿಸುವ ರಾಷ್ಟ್ರಗಳು ‘ಫ್ಯಾನ್‌ ಫೆಸ್ಟ್‌’ಗಳನ್ನು ಆಯೋಜಿಸುತ್ತವೆ. ಪ್ರಮುಖ ನಗರಗಳಲ್ಲಿ ದೊಡ್ಡ ಪರದೆಯ ಮೂಲಕ ಪಂದ್ಯಗಳ ನೇರ‍ಪ್ರಸಾರ ಮಾಡ ಲಾಗುತ್ತದೆ. ಸಂಗೀತ, ಇನ್ನಿತರ ಮನರಂಜನಾ ಕಾರ್ಯಕ್ರಮಗಳು ಇರುತ್ತವೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !